ಬಾಂಗ್ಲಾ ವಿರುದ್ಧದ ಟೆಸ್ಟ್ : ಅಶ್ವಿನ್ - ಜಡೇಜಾ ಹೋರಾಟ | 376ಕ್ಕೆ ಆಲೌಟ್ ಆದ ಭಾರತ

Update: 2024-09-20 07:32 GMT

Photo: BCCI

ಚೆನ್ನೈ : ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನ 2 ನೇ ದಿನದಂದು ಭಾರತವು ಬಾಂಗ್ಲಾದೇಶದ ವಿರುದ್ಧ 376 ರನ್‌ಗಳಿಗೆ ಆಲೌಟ್ ಆಯಿತು.

ರವಿಚಂದ್ರನ್ ಅಶ್ವಿನ್ (113) ಮತ್ತು ರವೀಂದ್ರ ಜಡೇಜಾ (86) ಸ್ಮರಣೀಯ ಜೊತೆಯಾಟವು ಭಾರತ ತಂಡಕ್ಕೆ ಬಹುದೊಡ್ಡ ಆಸರೆ ನೀಡಿತು.

ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶವು ಊಟದ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡಿತು.

ಝಾಕಿರ್ ಹಸನ್ ಮತ್ತು ಮೊಮಿನುಲ್ ಹಕ್ ಅವರನ್ನು ಔಟ್ ಮಾಡುವ ಮೂಲಕ ಆಕಾಶ್ ದೀಪ್ ಎರಡು ವಿಕೆಟ್ ಕಬಳಿಸಿದರು. 26 ಕ್ಕೆ 3 ವಿಕೆಟ್ ಕಳೆದುಕೊಂಡಿರರುವ ಬಾಂಗ್ಲಾದೇಶ ತಂಡದ

ನಜ್ಮುಲ್ ಹೊಸೈನ್ ಶಾಂಟೊ ಈಗ ಕ್ರೀಸ್‌ನಲ್ಲಿ ಮುಶ್ಫಿಕರ್ ರಹೀಮ್ ಜೊತೆ ಸೇರಿಕೊಂಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News