2026ರ ಏಶ್ಯನ್ ರೈಫಲ್ - ಪಿಸ್ತೂಲ್ ಕಪ್‌ಗೆ ಭಾರತ ಆತಿಥ್ಯ
ಹೊಸದಿಲ್ಲಿ : ಭಾರತವು 2026ರ ಏಶ್ಯನ್ ರೈಫಲ್/ಪಿಸ್ತೂಲ್ ಕಪ್ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ವರದಿಯಾಗಿದೆ.
ಏಶ್ಯನ್ ಶೂಟಿಂಗ್ ಕಾನ್ಫೆಡರೇಡಶನ್(ಎಎಸ್‌ಸಿ) ವಿಶ್ವಕಪ್ ಆತಿಥ್ಯದ ಹಕ್ಕು ಹಂಚಿಕೆ ಮಾಡಿದ ನಂತರ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್‌ಆರ್‌ಎಐ)ಘೋಷಿಸಿದೆ.
ಪಂದ್ಯಾವಳಿಯ ದಿನಾಂಕವನ್ನು ದೃಢಪಡಿಸುವಂತೆ ಏಶ್ಯನ್ ಶೂಟಿಂಗ್ ಕಾನ್ಫೆಡರೇಡಶನ್‌ಗೆ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ಸೂಚಿಸಿದೆ.
ಮತ್ತೊಂದು ಪ್ರಮುಖ ಅಂತರರಾಷ್ಟ್ರೀಯ ಸ್ಪರ್ಧೆ ಆಯೋಜಿಸುವ ಅವಕಾಶ ಪಡೆದಿರುವುದಕ್ಕೆ ಎನ್‌ಆರ್‌ಎಐ ಅಧ್ಯಕ್ಷ ಕಾಳಿಕೇಶ್ ನಾರಾಯಣ್ ಸಿಂಗ್ ದೇವೊ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸುಲ್ತಾನ್ ಸಿಂಗ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಏಶ್ಯನ್ ರೈಫಲ್/ಪಿಸ್ತೂಲ್ ಕಪ್ ಆತಿಥ್ಯದ ಅವಕಾಶ ಸಿಗುವ ಮೂಲಕ ಭಾರತೀಯ ಶೂಟಿಂಗ್ ಗೆ ಜಾಗತಿಕ ಮಟ್ಟದ ಮಾನ್ಯತೆ ಲಭಿಸಿದೆ. ಭಾರತೀಯ ಶೂಟರ್‌ಗಳಿಗೆ ತವರು ನೆಲದಲ್ಲಿ ಸ್ಪರ್ಧಿಸುವ ಅವಕಾಶವೂ ಲಭಿಸಿದೆ ಎಂದು ನಾರಾಯಣ ಸಿಂಗ್ ದೇವೋ ಬೆಟ್ಟು ಮಾಡಿದ್ದಾರೆ.
ಭಾರತವು ಈ ಹಿಂದೆ 2015ರ ಏಶ್ಯನ್ ಏರ್ ಗನ್ ಚಾಂಪಿಯನ್‌ಶಿಪ್, 2016ರ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ಗಳು ಹಾಗೂ ಎರಡು ವಿಶ್ವಕಪ್ ಫೈನಲ್‌ಗಳು ಸೇರಿದಂತೆ ಆರು ಐಎಸ್‌ಎಸ್‌ಎಫ್ ಸ್ಪರ್ಧೆಗಳನ್ನು ಒಳಗೊಂಡಂತೆ ಮಹತ್ವದ ಶೂಟಿಂಗ್ ಈವೆಂಟ್‌ಗಳನ್ನು ಆಯೋಜಿಸಿದೆ.