ಪ್ರಥಮ ಟೆಸ್ಟ್| ರಿಷಭ್ ಪಂತ್, ಶುಭಮನ್ ಗಿಲ್ ಆಕರ್ಷಕ ಶತಕ: ಬಾಂಗ್ಲಾಕ್ಕೆ 515 ರನ್‌ ಗಳ ಬೃಹತ್‌ ಗುರಿ ನೀಡಿದ ಭಾರತ

Update: 2024-09-21 08:02 GMT

Photo:X/BCCI

ಚೆನ್ನೈ: ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (109) ಹಾಗೂ ಭರವಸೆಯ ಆಟಗಾರ ಶುಭಮನ್ ಗಿಲ್ ಆಕರ್ಷಕ ಶತಕ (ಅಜೇಯ 119)ದ ನೆರವಿನೊಂದಿಗೆ ಬಾಂಗ್ಲಾದೇಶ ತಂಡದ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬಿಗಿ ಹಿಡಿತ ಸಾಧಿಸಿದೆ.

ಭಾರತ 514 ರನ್‌ ಗಳ ಮುನ್ನಡೆ ಸಾಧಿಸಿದ್ದು, ಡಿಕ್ಲೇರ್‌ ಮಾಡಿಕೊಂಡಿದೆ.

ಪ್ರಥಮ ಇನಿಂಗ್ಸ್ ನಲ್ಲಿ 376 ರನ್ ಗಳಿಸಿದ ಭಾರತ ತಂಡವು, ಬಾಂಗ್ಲಾ ತಂಡವನ್ನು ಕೇವಲ 149 ರನ್ ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ನಂತರ ಎರಡನೆ ಇನಿಂಗ್ಸ್ ಗೆ ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು ಮೊದಲ ಇನಿಂಗ್ಸ್ ನಂತೆಯೇ ಆರಂಭಿಕ ಹಿನ್ನಡೆ ಅನುಭವಿಸಿತು. ಕೇವಲ 67 ರನ್ ಆಗುವುದರೊಳಗೆ 3 ಪ್ರಮುಖ ವಿಕೆಟ್ ಕಳೆದುಕೊಂಡ ಭಾರತ ತಂಡವು ಕುಸಿತದ ಭೀತಿಗೆ ತುತ್ತಾಗಿತ್ತು.

ಆಗ, ಕ್ರೀಸಿಗೆ ಆಗಮಿಸಿದ ರಿಷಭ್ ಪಂತ್ ತಮ್ಮ ಎಂದಿನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 128 ಎಸೆತಗಳಲ್ಲಿ 109 ರನ್ ಗಳಿಸಿದರು. ಅವರ ಶತಕದಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್ ಗಳಿದ್ದವು. ಶತಕ ಗಳಿಸಿದ ನಂತರ, ಮೆಹಿದಿ ಹಸನ್ ಮಿರಾಜ್ ಮಾಡಿದ ಬೌಲಿಂಗ್ ನಲ್ಲಿ ಅವರಿಗೇ ಕ್ಯಾಚಿತ್ತು ರಿಷಭ್ ಪಂತ್ ನಿರ್ಗಮಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News