445 ರನ್‌ಗೆ ಆಲೌಟ್ ಆದ ಭಾರತ: ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 67 ರನ್

Update: 2024-02-16 09:24 GMT

Photo: X/BCCI

ರಾಜ್‌ಕೋಟ್: ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯದ ಎರಡನೆ ದಿನವಾದ ಇಂದು ಭಾರತ ತಂಡವು 445 ರನ್ ಗಳಿಸಿ ಆಲೌಟ್ ಆಯಿತು. ನಿನ್ನೆ ಶತಕ ಗಳಿಸಿ ಅಜೇಯರಾಗುಳಿದಿದ್ದ ರವೀಂದ್ರ ಜಡೇಜಾ, ಮತ್ತೆ ತಮ್ಮ ಲಯವನ್ನು ಕಂಡುಕೊಳ್ಳಲಾಗದೆ ಜೋ ರೂಟ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ನಿರ್ಗಮಿಸಿದರು.

ನಂತರ ಕ್ರೀಸ್‌ಗೆ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜುರೇಲ್ ತಾಳ್ಮೆಯ ಆಟ ಪ್ರದರ್ಶಿಸಿ 46 ರನ್ ಗಳಿಸಿದರು. ರೆಹ್ಮಾನ್ ಅಹ್ಮದ್ ಬೌಲಿಂಗ್‌ನಲ್ಲಿ ಬೆನ್ ಫೋಕ್ಸ್‌ಗೆ ಕ್ಯಾಚಿತ್ತು ನಿರ್ಗಮಿಸಿದ ಅವರು ಕೇವಲ 4 ರನ್‌ಗಳ ಅಂತರದಲ್ಲಿ ಅರ್ಧ ಶತಕ ವಂಚಿತರಾದರು. ಜುರೇಲ್ ರೊಂದಿಗೆ ಉತ್ತಮ ಜೊತೆಯಾಟವಾಡಿದ ಮತ್ತೊಬ್ಬ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್, ಅತ್ಯುಪಯುಕ್ತ 37 ರನ್ ಗಳಿಸಿದರು.

ಇಂಗ್ಲೆಂಡ್ ಪರ ನಾಲ್ಕು ವಿಕೆಟ್ ಕಬಳಿಸುವ ಮೂಲಕ ವುಡ್ ಯಶಸ್ವಿ ಬೌಲರ್ ಆಗಿ ಹೊಮ್ಮಿದರು.

ಇತ್ತೀಚಿನ ವರದಿಗಳ ಪ್ರಕಾರ, ಇಂಗ್ಲೆಂಡ್ ತಂಡವು ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 10 ಓವರ್‌ ಗಳಲ್ಲಿ  ವಿಕೆಟ್ ನಷ್ಟವಿಲ್ಲದೆ 67 ರನ್ ಗಳಿಸಿದೆ. ಈ ಮೊತ್ತದಲ್ಲಿ ದಂಡ ರೂಪದ ಐದು ರನ್ ಕೂಡಾ ಸೇರಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 445/10

ಇಂಗ್ಲೆಂಡ್: 67/0

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News