ಏಶ್ಯನ್ ಗೇಮ್ಸ್| ಮಳೆಯಿಂದಾಗಿ ಫೈನಲ್‌ ಪಂದ್ಯ ರದ್ದು: ಭಾರತಕ್ಕೆ ಒಲಿದು ಬಂದ ಮತ್ತೊಂದು ಚಿನ್ನ

Update: 2023-10-07 10:10 GMT

Photo: X/BCCI

ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನ ಟಿ20 ಕ್ರಿಕೆಟ್‌ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಫೈನಲ್‌ ಪಂದ್ಯಾಟವು ಮಳೆಯಿಂದಾಗಿ ರದ್ದುಗೊಂಡಿದೆ.

ಅಫ್ಘಾನಿಸ್ತಾನಕ್ಕಿಂತಲೂ ಉತ್ತಮ ರ್ಯಾಂಕಿಂಗ್‌ ಹೊಂದಿರುವ ಕಾರಣ ಭಾರತವನ್ನು ವಿಜಯಿ ತಂಡವೆಂದು ಘೋಷಿಸಲಾಗಿದೆ. ಈ ಮೂಲಕ ಭಾರತ ತಂಡವು ಚಿನ್ನದ ಪದಕ ಗೆದ್ದಿದೆ.

ಇದೇ ಮೊದಲ ಬಾರಿಗೆ ಏಶ್ಯನ್‌ ಗೇಮ್ಸ್‌ನಲ್ಲಿ ಟಿ20 ಕ್ರಿಕೆಟ್‌ ಅನ್ನು ಕೂಡಾ ಸೇರಿಸಲಾಗಿದ್ದು, ಭಾರತದ ಮಹಿಳಾ ಹಾಗೂ ಪುರುಷರ ತಂಡವು ಚಿನ್ನದ ಪದಕಗಳನ್ನು ಗೆದ್ದಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News