ಐಪಿಎಲ್ 2024: ಲಕ್ನೊ ತಂಡ ತೊರೆದು ಮತ್ತೆ ಕೆಕೆಆರ್ ತಂಡಕ್ಕೆ ಮರಳಿದ ಗೌತಮ್ ಗಂಭೀರ್

Update: 2023-11-22 07:41 GMT

ಗೌತಮ್ ಗಂಭೀರ್ (File Photo: BCCI)

ಕೋಲ್ಕತ್ತಾ: ಆರು ವರ್ಷಗಳ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ತೊರೆದಿದ್ದ ಕ್ರಿಕೆಟಿಗ ಗೌತಮ್ ಗಂಭೀರ್, ಈ ಬಾರಿ ವಿಭಿನ್ನ ಪಾತ್ರದೊಂದಿಗೆ ಕೆಕೆಆರ್ ತಂಡಕ್ಕೆ ಮರಳಿದ್ದಾರೆ. ಅವರು ಈ ಬಾರಿ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಕೆಕೆಆರ್ ತಂಡದ ಈವರೆಗಿನ ಅತ್ಯಂತ ಯಶಸ್ವಿ ನಾಯಕರಾಗಿರುವ ಗೌತಮ್ ಗಂಭೀರ್ ಅವರು 2012 ಹಾಗೂ 2014ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಅವರು 2011ರಿಂದ 2017ರವರೆಗೆ ಕೆಕೆಆರ್ ತಂಡದ ನಾಯಕರಾಗಿ ಏಳು ವರ್ಷ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News