ಜೋ ರೂಟ್‌ಗೆ ಸಚಿನ್ ದಾಖಲೆ ಮುರಿಯುವ ಸಾಮರ್ಥ್ಯವಿದೆ : ರಿಕಿ ಪಾಂಟಿಂಗ್

Update: 2024-08-15 17:02 GMT

ರಿಕಿ ಪಾಂಟಿಂಗ್,  ಜೋ ರೂಟ್‌ 

ಮೆಲ್ಬರ್ನ್ : ಇಂಗ್ಲೆಂಡ್‌ನ ಜೋ ರೂಟ್ ಮುಂದಿನ 4 ವರ್ಷಗಳ ಕಾಲ ಸದ್ಯದ ಫಾರ್ಮ್ ಕಾಯ್ದುಕೊಂಡರೆ ಸಚಿನ್ ತೆಂಡುಲ್ಕರ್ ಅವರ ಟೆಸ್ಟ್ ರನ್ ದಾಖಲೆಯನ್ನು ಮುರಿಯಬಹುದು ಎಂದು ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಅವರಿಗೆ ಅಂತಹ ಸಾಮರ್ಥ್ಯವಿದೆ. ಅವರಿಗೆ ಈಗ 33 ವರ್ಷ. ಸಚಿನ್‌ಗಿಂತ 3,000 ರನ್ ಹಿಂದಿದ್ದಾರೆ. ರೂಟ್ ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎನ್ನುವುದನ್ನು ಎಲ್ಲವೂ ಅವಲಂಬಿಸಿದೆ. ವರ್ಷಕ್ಕೆ 10ರಿಂದ 14 ಟೆಸ್ಟ್‌ನಲ್ಲಿ 800ರಿಂದ 1,000 ರನ್ ಗಳಿಸಿದರೆ ಮೂರ್ನಾಲ್ಕು ವರ್ಷಗಳಲ್ಲಿ ಅವರು ಈ ಸಾಧನೆ ಮಾಡಬಹುದು ಎಂದು ಪಾಂಟಿಂಗ್ ಹೇಳಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ಇತ್ತೀಚೆಗೆ ಎಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ರೂಟ್ ಅವರು 12,000 ರನ್ ಪೂರೈಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ 7ನೇ ಬ್ಯಾಟರ್ ಎನಿಸಿಕೊಂಡಿದ್ದರು.

ರೂಟ್ 143 ಟೆಸ್ಟ್ ಪಂದ್ಯಗಳಲ್ಲಿ 12, 027 ರನ್ ಗಳಿಸಿದ್ದು, ಇದರಲ್ಲಿ 32 ಶತಕಗಳು ಹಾಗೂ 63 ಅರ್ಧಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಗರಿಷ್ಠ ರನ್ ಸ್ಕೋರರ್ ಆಗಿರುವ ರೂಟ್ ಅವರು ಶ್ರೀಲಂಕಾದ ಕುಮಾರ ಸಂಗಕ್ಕರ(12,400 ರನ್) ಹಾಗೂ ರೂಟ್ ಅವರ ಮಾಜಿ ಸಹ ಆಟಗಾರ ಅಲಸ್ಟೈರ್ ಕುಕ್(12,472 ರನ್)ಅವರ ದಾಖಲೆಯನ್ನು ಮುರಿದಿದ್ದರು.

ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಾಂಟಿಂಗ್ 168 ಟೆಸ್ಟ್‌ಗಳಲ್ಲಿ 1,3378 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News