ಜುಡೋ ಪಟು ತುಲಿಕಾ ಮಾನ್ ಒಲಿಂಪಿಕ್ಸ್ ಅಭಿಯಾನ ಅಂತ್ಯ

Update: 2024-08-02 15:19 GMT

 ತುಲಿಕಾ ಮಾನ್ | PC : olympics.com

ಪ್ಯಾರಿಸ್ : ಭಾರತದ ಜುಡೋ ಅತ್ಲೀಟ್ ತುಲಿಕಾ ಮಾನ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 78+ಕೆಜಿ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದರು.

ಶುಕ್ರವಾರ ಕೇವಲ 28 ಸೆಕೆಂಡ್ ನಲ್ಲಿ ಅಂತ್ಯಗೊಂಡ ಮೊದಲ ಸುತ್ತಿನ ಪಂದ್ಯದಲ್ಲಿ ದಿಲ್ಲಿಯ 25ರ ಹರೆಯದ ತುಲಿಕಾ ಅವರು ಲಂಡನ್ ಒಲಿಂಪಿಕ್ಸ್ ಚಾಂಪಿಯನ್, ಕ್ಯೂಬಾದ ಒರಿಟ್ಝ್ ವಿರುದ್ಧ 0-10 ಅಂತರದಿಂದ ಸೋತಿದ್ದಾರೆ.

ಎರಡು ಬೆಳ್ಳಿ ಹಾಗೂ ಕಂಚು ಸಹಿತ 4 ಒಲಿಂಪಿಕ್ಸ್ ಪದಕಗಳನ್ನು ಜಯಿಸಿದ್ದ ಕ್ಯೂಬಾ ಸ್ಪರ್ಧಾಳುವಿನ ಕಠಿಣ ಸವಾಲು ಎದುರಿಸುವಲ್ಲಿ 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ತುಲಿಕಾ ಮಾನ್ ವಿಫಲರಾದರು.

ಈ ಸೋಲಿನೊಂದಿಗೆ ಭಾರತದ ಜುಡೋ ಅಭಿಯಾನ ಅಂತ್ಯವಾಗಿದೆ. ತುಲಿಕಾ ಗೇಮ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ ಏಕೈಕ ಜುಡೋ ಪಟು ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News