ಖೋ ಖೋ ವಿಶ್ವಕಪ್: ಭಾರತದ ಮಹಿಳಾ ತಂಡ ಚಾಂಪಿಯನ್

Update: 2025-01-19 20:19 IST
Kho Kho World Cup India
PC : X \ @Kkwcindia
  • whatsapp icon

ಹೊಸದಿಲ್ಲಿ: ನೇಪಾಳ ತಂಡವನ್ನು ಸೋಲಿಸಿದ ಭಾರತೀಯ ಮಹಿಳೆಯರ ತಂಡವು ಮೊತ್ತ ಮೊದಲ ಬಾರಿ ಖೋ ಖೋ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ರವಿವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಿಯಾಂಕಾ ನೇತೃತ್ವದ ಭಾರತ ತಂಡವು ನೇಪಾಳ ತಂಡವನ್ನು 78-40 ಅಂತರದಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಭಾರತವು ಚೇಸ್ ಹಾಗೂ ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿ ಎದುರಾಳಿ ತಂಡಕ್ಕೆ ಸವಾಲಾಯಿತು.

ಭಾರತದ ಮಹಿಳಾ ತಂಡವು ಟೂರ್ನಿಯುದ್ದಕ್ಕೂ ಅಜೇಯ ದಾಖಲೆ ಕಾಯ್ದುುಕೊಂಡಿತು. ಎ ಗುಂಪಿನಲ್ಲಿ ಎಲ್ಲ 3 ಪಂದ್ಯಗಳನ್ನು ಜಯಿಸಿ ಅಗ್ರ ಸ್ಥಾನ ಪಡೆದಿತ್ತು. ಸೆಮಿ ಫೈನಲ್‌ನಲಿ ದಕ್ಷಿಣ ಆಫ್ರಿಕ ತಂಡವನ್ನು 66-16 ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿತ್ತು.

ನೇಪಾಳ ತಂಡ ಕೂಡ ಫೈನಲ್ ತನಕ ಅಜೇಯ ದಾಖಲೆ ಉಳಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News