ಅಭಿಮಾನಿಗಳ ಮನಗೆದ್ದ ಕೊಹ್ಲಿ-ದ್ರಾವಿಡ್ ಆಲಿಂಗನ

ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ | PC : X \ @Trend_VKohli
ಜೈಪುರ: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ಮುನ್ನಾ ದಿನವಾದ ಶನಿವಾರ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಮ್ನಲ್ಲಿ ಪರಸ್ಪರ ಆಲಿಂಗಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ತಮ್ಮ ಹಾರ್ದಿಕ ಬಾಂಧವ್ಯವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೋಚ್ ಆಗಿರುವ ದ್ರಾವಿಡ್ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಲೀಗ್ ಪಂದ್ಯವೊಂದರಲ್ಲಿ ಆಡುವಾಗ ಅವರು ಗಾಯಗೊಂಡಿದ್ದರು. ಎಡಗಾಲಿಗೆ ಬ್ಯಾಂಡೇಜ್ ಹಾಕಿದ್ದು ಗಾಲಿಕುರ್ಚಿಗೆ ಸೀಮಿತವಾಗಿದ್ದರೂ, ರಾಜಸ್ಥಾನ ರಾಯಲ್ಸ್ ತಂಡದ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದಾರೆ.
The Meet-up and hug Moments of Virat Kohli and Rahul Dravid. ❤️ pic.twitter.com/G49QF0svNB
— Virat Kohli Fan Club (@Trend_VKohli) April 12, 2025
ಮೈದಾನದಲ್ಲಿ ದ್ರಾವಿಡ್ರನ್ನು ದೂರದಿಂದ ನೋಡಿದ ಕೊಹ್ಲಿ ಅವರಿದ್ದಲ್ಲಿಗೆ ನಡೆದುಕೊಂಡು ಹೋಗಿ ಮಂಡಿಯೂರಿದರು. ಬಳಿಕ ಭಾರತೀಯ ಕ್ರಿಕೆಟ್ ತಂಡದ ಮಾಜಿ ಪ್ರಧಾನ ಕೋಚ್ ರನ್ನು ಆಲಿಂಗಿಸಿಕೊಂಡರು. ಇಬ್ಬರು ಕ್ರಿಕೆಟ್ ಕಲಿಗಳು ಉಭಯ ಕುಶಲೋಪರಿ ವಿಚಾರಿಸಿ ಹಾರ್ದಿಕವಾಗಿ ನಕ್ಕರು. ಈ ದೃಶ್ಯಗಳನ್ನು ರಾಜಸ್ಥಾನ ರಾಯಲ್ಸ್ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಹಂಚಿಕೊಂಡಿದೆ. ಅವು ಅಭಿಮಾನಿಗಳ ಹೃದಯ ಗೆದ್ದವು.
ಉಭಯ ತಂಡಗಳ ನಡುವಿನ ಪಂದ್ಯವು ರವಿವಾರ ನಡೆಯಲಿದೆ.