ಒಂದೇ ಓವರ್ ನಲ್ಲಿ 43 ರನ್ ಗಳಿಸಿ ವಿಶ್ವದಾಖಲೆ ಬರೆದ ಲೂಯಿಸ್ ಕಿಂಬೆರ್
ಹೊಸದಿಲ್ಲಿ: ಸಸೆಕ್ಸ್ ತಂಡದ ಬೌಲರ್ ಒಲ್ಲೀ ರಾಬಿನ್ಸನ್ ಅವರ ಒಂದು ಓವರ್ ನಲ್ಲಿ 43 ರನ್‍ಗಳನ್ನು ಗಳಿಸುವ ಮೂಲಕ ಲೀಸ್ಟರ್‍ಶೈರ್ ನ ಬ್ಯಾಟರ್ ಲೂಯಿಸ್ ಕಿಂಬೆರ್, ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಕೌಂಟಿ ಚಾಂಪಿಯನ್‍ಶಿಪ್‍ನ ಡಿವಿಷನ್ 2 ಪಂದ್ಯದ ನಾಲ್ಕನೇ ದಿನ ಸಸೆಕ್ಸ್ ನ ರಾಬಿನ್ಸನ್, ಚಾಂಪಿಯನ್‍ಶಿಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಕೆಟ್ಟ ದಾಖಲೆಯನ್ನು ನಿರ್ಮಿಸಿದರು. ರಾಬಿನ್ಸನ್ ತನ್ನ ಓವರ್ ನಲ್ಲಿ 43 ರನ್ ಬಿಟ್ಟುಕೊಟ್ಟರು. ಇಂಗ್ಲಿಷ್ ಪ್ರಥಮದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಓವರ್ ನಲ್ಲಿ ಇಷ್ಟೊಂದು ರನ್ ನೀಡಿರುವುದು ಇದೇ ಮೊದಲು. ಓವರ್ ನಲ್ಲಿ ಮೂರು ನೋಬಾಲ್ ಸಹಿತ ಒಟ್ಟು ಒಂಬತ್ತು ಎಸೆತಗಳನ್ನು ರಾಬಿನ್ಸನ್ ಬೌಲ್ ಮಾಡಿದರು. ಈ ಹಿಂದೆ ಒಂದೇ ಓವರ್ ನಲ್ಲಿ 38 ರನ್ ಗಳಿಸಿದ್ದು ದಾಖಲೆಯಾಗಿತ್ತು. ಅಲೆಕ್ಸ್ ಟುಡೋರ್ ಮತ್ತು ಆ್ಯಂಡ್ರೂ ಫ್ಲಿಂಟಾಫ್ 1998ರಲ್ಲಿ ಈ ದಾಖಲೆಯನ್ನು ಜಂಟಿಯಾಗಿ ಹೊಂದಿದ್ದರು. ಡಾನ್ ಲಾರೆನ್ಸ್ ಅವರು ಶೋಯಬ್ ಬಶೀರ್ ಬೌಲಿಂಗ್‍ನಲ್ಲಿ ಈ ದಾಖಲೆಯನ್ನು ಸರಿಗಟ್ಟಿದ್ದರು.
ಕೇವಲ 95 ಎಸೆತಗಳಲ್ಲಿ ಕಿಂಬೆರ್ ಅವರ ಸಿಡಿಲಬ್ಬರದ 192 ರನ್‍ಗಳ ನೆರವಿನಿಂದ ಬೆನ್ ಕಾಕ್ಸ್ ಜತೆಗೆ ಎಂಟನೇ ವಿಕೆಟ್ಗೆ 200 ರನ್‍ಗಳನ್ನು ಸೇರಿಸಲಾಯಿತು.
LOUIS KIMBER HAS TAKEN 43 OFF AN OVER pic.twitter.com/kQ4cLUhKN9
— Vitality County Championship (@CountyChamp) June 26, 2024