ಕೊಪಾ ಅಮೆರಿಕ ಟೂರ್ನಿಯಲ್ಲಿ ಗೋಲು ಗಳಿಸಿದ ಹಿರಿಯ ಆಟಗಾರ ಲೂಯಿಸ್ ಸುಯರೆಝ್

Update: 2024-07-14 14:57 GMT

PC : @Uruguay \ X

ಚಾರ್ಲೊಟ್ : ಕೆನಡಾ ವಿರುದ್ಧ ಪ್ಲೇ ಆಫ್ ಪಂದ್ಯದಲ್ಲಿ ದ್ವಿತೀಯಾರ್ಧದ ಕೊನೆಯ ಕ್ಷಣದಲ್ಲಿ ಉರುಗ್ವೆ ಹಿರಿಯ ಆಟಗಾರ ಲೂಯಿಸ್ ಸುಯರೆಝ್ ಗೋಲು ಗಳಿಸಿದರು. ಕೊಪಾ ಅಮೆರಿಕ ಇತಿಹಾಸದಲ್ಲಿ ಗೋಲು ಗಳಿಸಿದ ಹಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಸುಯರೆಝ್ ಗೋಲು ಗಳಿಸಿದಾಗ ಅವರಿಗೆ 37 ವರ್ಷ, ಐದು ತಿಂಗಳು, 21 ದಿನವಾಗಿದೆ.

ಕೊಪಾ ಅಮೆರಿಕ ಟೂರ್ನಿಯಲ್ಲಿ ಗೋಲು ಗಳಿಸಿದ ಹಿರಿಯ ಆಟಗಾರನೆಂದರೆ ಅರ್ಜೆಂಟೀನದ ಏಂಜೆಲ್ ಲ್ಯಾಬ್ರುನಾ. 1956ರ ಜನವರಿ 29ರಂದು ಚಿಲಿ ವಿರುದ್ಧ ಲ್ಯಾಬ್ರುನಾ ಗೋಲು ಗಳಿಸಿದಾಗ ಅವರಿಗೆ 37 ವರ್ಷ, 34 ದಿನಗಳಾಗಿದ್ದವು.

ಉರುಗ್ವೆ ತಂಡ 1-2 ಹಿನ್ನಡೆಯಲ್ಲಿದ್ದಾಗ ಸುಯರೆಝ್ ಅವರು ಜೋಸ್ ಮರಿಯಾ ಗಿಮಿನೆಝ್ ನೀಡಿದ ಚೆಂಡನ್ನು ಸ್ವೀಕರಿಸಿ ಅದನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.

ಉರುಗ್ವೆ ಪರ ಗರಿಷ್ಠ ಗೋಲು ಗಳಿಸಿದ ಸಾಧನೆ ಮಾಡಿರುವ ಸುಯರೆಝ್ ತಾನಾಡಿದ 142ನೇ ಪಂದ್ಯದಲ್ಲಿ 69ನೇ ಗೋಲು ಗಳಿಸಿದರು.

ಕೆನಡಾ ವಿರುದ್ಧ ಗೋಲು ಗಳಿಸುವ ಮೊದಲು ಸುಯರೆಝ್ ಅವರು 2022ರ ಮಾರ್ಚ್ 29ರಂದು ಚಿಲಿ ವಿರುದ್ಧ ಫಿಫಾ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಕೊನೆಯ ಬಾರಿ ಗೋಲು ಗಳಿಸಿದ್ದರು. ಈ ಗೋಲು ಉರುಗ್ವೆಗೆ ಗೆಲುವು ತಂದುಕೊಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News