ದುಲೀಪ್ ಟ್ರೋಫಿಯಲ್ಲಿ 181 ರನ್ | ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ಮುಶೀರ್

Update: 2024-09-06 16:55 GMT

Photo: X

ಬೆಂಗಳೂರು : ದುಲೀಪ್ ಟ್ರೋಫಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ 181 ರನ್ ಗಳಿಸಿ ಎಲ್ಲರ ಮನ ಗೆದ್ದಿರುವ ಮುಶೀರ್ ಖಾನ್ ಟೂರ್ನಿಯ ಇತಿಹಾಸದಲ್ಲಿ ನವದೀಪ್ ಸೈನಿ ಜೊತೆ 8ನೇ ವಿಕೆಟ್‌ಗೆ ಗುರಿಷ್ಠ ಜೊತೆಯಾಟ ನಡೆಸಿದ್ದಾರೆ. ಎಲಿಟ್ ಲಿಸ್ಟ್‌ನಲ್ಲಿ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡುಲ್ಕರ್‌ರನ್ನು ಮುಶೀರ್ ಹಿಂದಿಕ್ಕಿದ್ದಾರೆ.

ಮುಶೀರ್ (181 ರನ್) ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಕಿರಿಯ ವಯಸ್ಸಿನ 3ನೇ ಆಟಗಾರ ನಾಗಿದ್ದಾರೆ. ಬಾಬಾ ಅಪರಾಜಿತ್ ಹಾಗೂ ಯಶ್ ಧುಲ್ ಮೊದಲೆರಡು ಸ್ಥಾನದಲ್ಲಿದ್ದಾರೆ. ಸಚಿನ್ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ 159 ರನ್ ಗಳಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News