"ಆಕೆಯೂ ನನ್ನ ತಾಯಿ, ಅವರಿಗೆ ನಾನು ಅಭಾರಿ": ನೀರಜ್‌ ಚೋಪ್ರಾ ತಾಯಿಯ ಬಗ್ಗೆ ಭಾವುಕ ಮಾತುಗಳನ್ನಾಡಿದ ಅರ್ಷದ್‌ ನದೀಮ್‌

Update: 2024-08-12 07:29 GMT

ನೀರಜ್‌ ಚೋಪ್ರಾ ಮತ್ತು ಅರ್ಷದ್‌ ನದೀಮ್‌ (PTI)

ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಥ್ರೋ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್‌ ನದೀಮ್‌ ಅವರು ಬೆಳ್ಳಿ ಪದಕ ವಿಜೇತ ಭಾರತದ ನೀರಜ್‌ ಚೋಪ್ರಾ ಅವರ ತಾಯಿಯ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ.

“ಓರ್ವ ತಾಯಿ ಎಲ್ಲರಿಗೂ ತಾಯಿ, ಆದ್ದರಿಂದ ಆಕೆ ಎಲ್ಲರಿಗಾಗಿ ಪ್ರಾರ್ಥಿಸುತ್ತಾರೆ. ನಾನು ನೀರಜ್‌ ಚೋಪ್ರಾ ಅವರ ತಾಯಿಗೆ ಅಭಾರಿ. ಆಕೆಯೂ ನನ್ನ ತಾಯಿ. ಆಕೆಯೂ ನಮಗಾಗಿ ಪ್ರಾರ್ಥಿಸಿದರು, ನಾವು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಿದ ದಕ್ಷಿಣ ಏಷ್ಯಾದ ಇಬ್ಬರು ಆಟಗಾರರಾಗಿದ್ದೇವೆ, ಅಷ್ಟೇ,” ಎಂದು ಸ್ವದೇಶಕ್ಕೆ ಮರಳಿದ ನಂತರ ಮಾಧ್ಯಮ ಮಂದಿಯ ಜೊತೆ ಮಾತನಾಡಿದ ನದೀಮ್‌ ಹೇಳಿದರು.

ನದೀಮ್‌ ಅವರನ್ನ ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಕಾದಿದ್ದರು. ನದೀಮ್‌ ಅವರು ಪಾಕಿಸ್ತಾನಕ್ಕೆ 40 ವರ್ಷಗಳ ಬಳಿಕ ಮೊದಲ ಚಿನ್ನದ ಪದಕ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News