ಮುಂದಿನ ವರ್ಷ ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸ

Update: 2023-11-29 14:14 GMT

Photo:X/BCCI

ಹೊಸದಿಲ್ಲಿ :ಭಾರತೀಯ ಕ್ರಿಕೆಟ್ ತಂಡ 2024ರಲ್ಲಿ ಆರು ಪಂದ್ಯಗಳ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನಾಡಲು ದ್ವೀಪರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಬೆಳವಣಿಗೆಯು ಶ್ರೀಲಂಕಾ ಕ್ರಿಕೆಟ್(ಎಸ್ಎಲ್ಸಿ)ಹಾಗೂ ಅದರ ಪ್ರಸಾರಕರಿಗೆ ಖುಷಿ ತಂದಿದೆ.

► ಬಿಕ್ಕಟ್ಟು ಪೀಡಿತ ಶ್ರೀಲಂಕಾ ಕ್ರಿಕೆಟ್: ಅಂಡರ್-19 ವಿಶ್ವಕಪ್ ಟೂರ್ನಿಯನ್ನು ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿರುವ ಐಸಿಸಿ,ಮಂಡಳಿಯ ಕಾರ್ಯಚಟುವಟಿಕೆಯಲ್ಲಿ ಲಂಕಾ ಸರಕಾರ ಮಧ್ಯಪ್ರವೇಶಿಸುವುದನ್ನು ಉಲ್ಲೇಖಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನ್ನು ಕಪ್ಪುಪಟ್ಟಿಯಲ್ಲಿ ಸೇರಿಸಿದೆ. ಆದರೆ, ಪುರುಷರ ಹಾಗೂ ಮಹಿಳಾ ತಂಡಗಳಿಗೆ ಬಾಕಿ ಇರುವ ತಮ್ಮ ದ್ವಿಪಕ್ಷೀಯ ಸರಣಿಯನ್ನು ಪೂರ್ಣಗೊಳಿಸಲು ಅನುಮತಿ ನೀಡಲಾಗಿದೆ.

► ಭಾರತಕ್ಕೆ ಬಿಡುವಿಲ್ಲದ ಋತು: ಭಾರತವು ಮುಂದಿನ ವರ್ಷದ ಜುಲೈ ಹಾಗೂ ಆಗಸ್ಟ್ನಲ್ಲಿ ಮೂರು ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಆಡಲು ಶ್ರೀಲಂಕಾ ದೇಶಕ್ಕೆ ಭೇಟಿ ನೀಡಲಿದೆ. ಭಾರತವು 2024ರಲ್ಲಿ 10 ಟೆಸ್ಟ್, 21 ಏಕದಿನ ಹಾಗೂ 21 ಟಿ-20 ಸಹಿತ ಒಟ್ಟು 52 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಟಿ-20 ವಿಶ್ವಕಪ್ನಲ್ಲಿ ಆಡಲಾಗುವ ಹೆಚ್ಚುವರಿ ಪಂದ್ಯಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

► ಭಾರತಕ್ಕೆ ಕಠಿಣ ವಿದೇಶ ಪ್ರವಾಸ: ಈಗ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿರುವ ಇಂಗ್ಲೆಂಡ್ನಲ್ಲಿ ನಡೆಯುವ 3 ಪಂದ್ಯಗಳ ಸರಣಿಯು ಅತ್ಯಂತ ಮುಖ್ಯವಾಗಿದೆ.

ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯು ಮತ್ತೊಂದು ಕಠಿಣ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News