ಒಲಿಂಪಿಕ್ಸ್ ಕ್ವಾಲಿಫೈಯರ್ಸ್ 2024: ಪರಾಗ್ವೆ ವಿರುದ್ಧ ಆಘಾತಕಾರಿ ಸೋಲುಂಡ ಹಾಲಿ ಚಾಂಪಿಯನ್ ಬ್ರೆಝಿಲ್

Update: 2024-02-06 16:01 GMT

Photo: NDTV 

ಕ್ಯಾರಕಾಸ್: ದಕ್ಷಿಣ ಅಮೆರಿಕದ ನಾಲ್ಕು ತಂಡಗಳು ಭಾಗವಹಿಸುತ್ತಿರುವ 2024ರ ಒಲಿಂಪಿಕ್ಸ್ ಅರ್ಹತಾ ಟೂರ್ನಮೆಂಟ್ನಲ್ಲಿ ಬ್ರೆಝಿಲ್ನ ಅಂಡರ್-23 ತಂಡ ಪರಾಗ್ವೆ ವಿರುದ್ಧ 0-1 ಗೋಲು ಅಂತರದಿಂದ ಆಘಾತಕಾರಿ ಸೋಲನುಭವಿಸಿದೆ. ಹೀಗಾಗಿ ಹಾಲಿ ಚಾಂಪಿಯನ್ ಬ್ರೆಝಿಲ್ ಈ ವರ್ಷದ ಪ್ಯಾರಿಸ್ ಗೇಮ್ಸ್ನಲ್ಲಿ ಸ್ಥಾನ ಪಡೆಯುವ ವಿಚಾರದಲ್ಲಿ ಹಿನ್ನಡೆ ಅನುಭವಿಸಿದೆ.

ಬ್ರೆಝಿಲ್, ಪರಾಗ್ವೆ, ಅರ್ಜೆಂಟೀನ ಹಾಗೂ ವೆನೆಝುವೆಲಾ 2024ರ ಒಲಿಂಪಿಕ್ ಗೇಮ್ಸ್ಗಾಗಿ ರೌಂಡ್ ರಾಬಿನ್ ಅಂತಿಮ ಅರ್ಹತಾ ಹಂತದಲ್ಲಿ ಸ್ಪರ್ಧಿಸುತ್ತಿವೆ. ಕೇವಲ ಎರಡು ತಂಡಗಳು ಮಾತ್ರ ಪ್ಯಾರಿಸ್ ಗೇಮ್ಸ್ಗೆ ತೇರ್ಗಡೆಯಾಗುತ್ತದೆ.

ಮೊದಲಾರ್ಧದ ಕೊನೆಯ ಕ್ಷಣದಲ್ಲಿ ಫ್ಯಾಬ್ರಿಝಿಯೊ ಪೆರಾಲ್ಟಾ ಹೆಡರ್ನ ಮೂಲಕ ಗಳಿಸಿದ ಗೋಲು ಪರಾಗ್ವೆ ತಂಡದ ಅನಿರೀಕ್ಷಿತ ಗೆಲುವಿಗೆ ಕಾರಣವಾಯಿತು. ಪರಾಗ್ವೆ 2004ರಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್ನಲ್ಲಿ ಆಡಿತ್ತು.

ಕಳೆದ ವರ್ಷ ರಿಯಲ್ ಮ್ಯಾಡ್ರಿಡ್ ಗೆ ಸೇರ್ಪಡೆಯಾಗಿದ್ದ ಬ್ರೆಝಿಲ್ ನ ಯುವ ಆಟಗಾರ ಎಂಡ್ರಿಕ್ಸ್ ಗೆ ಸ್ಕೋರನ್ನು ಸಮಬಲಗೊಳಿಸುವ ಅವಕಾಶ ಒದಗಿಬಂದಿತ್ತು. ಆದರೆ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೈಚೆಲ್ಲಿದರು.

ಬ್ರೆಝಿಲ್ ಮುಂದಿನ ಸುತ್ತಿನಲ್ಲಿ ವೆನೆಝುವೆಲಾ ತಂಡವನ್ನು ಎದುರಿಸಲಿದೆ. ಈ ತಿಂಗಳಾರಂಭದಲ್ಲಿ ಪ್ರಾಥಮಿಕ ಹಂತದಲ್ಲಿ ವೆನೆಝುವೆಲಾ ತಂಡ ಬ್ರೆಝಿಲ್ ತಂಡವನ್ನು 3-1ರಿಂದ ಸೋಲಿಸಿತ್ತು.

ಪರಾಗ್ವೆ ಮಂಗಳವಾರದಂದು ಅರ್ಜೆಂಟೀನವನ್ನು ಎದುರಿಸಲಿದೆ.

ಕ್ಯಾರಕಾಸ್ನಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳು ಫೆಬ್ರವರಿ 11ರಂದು ಮುಕ್ತಾಯಗೊಳ್ಳುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News