ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 286ಕ್ಕೆ ಆಲೌಟ್

Update: 2023-10-06 12:22 GMT

ಚಿತ್ರ-  ಪಿಟಿಐ 

ಹೈದರಾಬಾದ್: ಇಲ್ಲಿನ ಉಪ್ಪಳ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ಪಕಪ್ ಕ್ರಿಕಟ್ 2023ರ 2ನೇ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸೆಣಸುತ್ತಿವೆ. ಪಾಕಿಸ್ತಾನ ತಂಡವು 49 ಓವರ್‌ಗಳಲ್ಲಿ 286 ರನ್‌ ಪೇರಿಸಿ ಆಲೌಟ್ ಆಯಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ನೆದರ್ಲ್ಯಾಂಡ್ಸ್ ತಂಡ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡ ಆರಂಬಿಕ ವೈಫಲ್ಯದ ನಡುವೆಯೂ ರಿಜ್ವಾನ್ 68 ರನ್‌, ಸೌದ್ ಶಕೀಲ್ 68 ರನ್‌ ನವಾಝ್ 39 ರನ್‌ ಹಾಗೂ ಶದಾಬ್ 32 ಗಳಿಸಿದರು . ನೆದರ್ಲ್ಯಾಂಡ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಾಸ್ ಡೆ ಲೀಡೆ 4 ವಿಕೆಟ್‌ ಪಡೆದರೆ, ಆರ್ಯನ್ ದತ್, ವಾನ್ ಬೀಕ್, ಆಕೆರ್ಮಾನ್ ಹಾಗೂ ಮೀಕೆರನ್ ತಲಾ ಒಂದೊಂದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News