ವಿನೇಶ್ ಫೋಗಟ್ ಗೆ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಚಿನ್ನ

Update: 2024-07-07 03:59 GMT

Vinesh Phogat. (Photo by Dean Mouhtaropoulos/Getty Images)

ಹೊಸದಿಲ್ಲಿ: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಮ್ಯಾಡ್ರಿಡ್ನಲ್ಲಿ ಶನಿವಾರ ನಡೆದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ನ 50 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರೀಸ್ ಒಲಿಂಪಿಕ್ಸ್ ಗೆ ಸನ್ನದ್ಧತೆಯನ್ನು ಪ್ರಕಟಿಸಿದ್ದಾರೆ.

ಮರೀರಾ ತ್ಯುಮೆರ್ಕೋವಾ ವಿರುದ್ಧ 10-5 ಅಂಕಗಳ ಗೆಲುವು ಸಾಧಿಸಿ, ಚಿನ್ನಕ್ಕೆ ಕೊಳರೊಡ್ಡಿದರು. ಫೋಗಟ್ ಈ ಮೊದಲು ವಿಶ್ವ ಚಾಂಪಿಯನ್ಶಿಪ್ನಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದರು.

ಈ ಮೊದಲು ರಷ್ಯವನ್ನು ಪ್ರತಿನಿಧಿಸುತ್ತಿದ್ದ ತ್ಯೂಮೆರ್ಕೋವಾ ಇದೀಗ ವೈಯಕ್ತಿಕ ತಟಸ್ಥ ಅಥ್ಲೀಟ್ ಆಗಿ ಪಾಲ್ಗೊಳ್ಳುತ್ತಿದ್ದಾರೆ. ಬುಧವಾರ ಕೊನೆಕ್ಷಣದಲ್ಲಿ ವೀಸಾ ಪಡೆದಿದ್ದ ವಿನೇಶ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News