ಪ್ಯಾರಿಸ್ ಒಲಿಂಪಿಕ್ಸ್‌| ರಫೆಲ್ ನಡಾಲ್‌ಗೆ ಸೋಲುಣಿಸಿ 3ನೇ ಸುತ್ತಿಗೆ ಲಗ್ಗೆ ಇಟ್ಟ ಜೊಕೊವಿಕ್

Update: 2024-07-29 16:18 GMT

ರಫೆಲ್ ನಡಾಲ್‌ | PC : Paris Olympics.com 

ಪ್ಯಾರಿಸ್: ರಫೆಲ್ ನಡಾಲ್‌ರನ್ನು ಮಣಿಸಿದ ನೊವಾಕ್ ಜೊಕೊವಿಕ್ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 3ನೇ ಸುತ್ತು ತಲುಪಿದ್ದಾರೆ.

ಜೊಕೊವಿಕ್ ಮೊದಲ ಸೆಟನ್ನು 6-1 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. ನಡಾಲ್ 2ನೇ ಸೆಟ್‌ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದರು. ಅಂತಿಮವಾಗಿ ಜೊಕೊವಿಕ್ 2ನೇ ಸೆಟನ್ನು 6-4 ಅಂತರದಿಂದ ಜಯಿಸಿದರು.

ಜೊಕೊವಿಕ್ ಹಾಗೂ ನಡಾಲ್ 60ನೇ ಬಾರಿ ಮುಖಾಮುಖಿಯಾದರು. ಹೆಡ್-ಟು-ಹೆಡ್ ದಾಖಲೆಯಲ್ಲಿ ಜೊಕೊವಿಕ್ 32-29 ಮುನ್ನಡೆ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News