ಪ್ಯಾರಿಸ್ ಒಲಿಂಪಿಕ್ಸ್ | ಪಿ.ವಿ. ಸಿಂಧುಗೆ ಆಘಾತಕಾರಿ ಸೋಲು

Update: 2024-08-01 18:00 GMT

ಪಿ.ವಿ. ಸಿಂಧು | PTI

ಪ್ಯಾರಿಸ್ : ಎರಡು ಬಾರಿ ಒಲಿಂಪಿಕ್ಸ್ ಪದಕ ಜಯಿಸಿರುವ ಪಿ.ವಿ. ಸಿಂಧು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಹಿ ಬಿಂಗ್ ಜಿಯಾವೊ ವಿರುದ್ಧ ಆಘಾತಕಾರಿ ಸೋಲುಂಡಿದ್ದಾರೆ. ಇದರೊಂದಿಗೆ 3ನೇ ಒಲಿಂಪಿಕ್ಸ್ ಪದಕ ಗೆಲ್ಲುವ ಸಿಂಧು ಕನಸು ಭಗ್ನವಾಗಿದೆ.

ಗುರುವಾರ ನಡೆದ ಅಂತಿಮ-16ರ ಪಂದ್ಯದಲ್ಲಿ ಸಿಂಧು 0-2(19-21, 14-21)ಅಂತರದಿಂದ ಸೋತು ನಿರಾಸೆಗೊಳಿಸಿದರು. ಈ ಸೋಲಿನೊಂದಿಗೆ ಸಿಂಧು ಅವರ ಒಲಿಂಪಿಕ್ಸ್ ಅಭಿಯಾನ ಅಂತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News