ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಭಾರತದ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ ಪ್ರಕಟ

Update: 2024-08-15 16:05 GMT

ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್-2024 ಫ್ರೆಂಚ್ ರಾಜಧಾನಿ ಪ್ಯಾರಿಸ್‌ನಲ್ಲಿ ಆಗಸ್ಟ್ 28ರಿಂದ ಸೆಪ್ಟಂಬರ್ 8ರ ತನಕ ನಡೆಯಲಿದೆ.

ಭಾರತವು ಅತ್ಯಂತ ಹೆಚ್ಚು 84 ಕ್ರೀಡಾಪಟುಗಳನ್ನು ಗೇಮ್ಸ್‌ಗೆ ಕಳುಹಿಸಿಕೊಡಲಿದೆ. ಟೋಕಿಯೊ ಗೇಮ್ಸ್‌ಗೆ 54 ಕ್ರೀಡಾಪಟುಗಳನ್ನು ಕಳುಹಿಸಿಕೊಡಲಾಗಿತ್ತು. ಪ್ಯಾರಿಸ್‌ಗೆ ತೆರಳುತ್ತಿರುವ 84 ಅಥ್ಲೀಟ್‌ಗಳ ಪೈಕಿ 32 ಮಂದಿ ಮಹಿಳೆಯರಿದ್ದಾರೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು 5 ಚಿನ್ನ, 8 ಬೆಳ್ಳಿ ಹಾಗೂ ಆರು ಕಂಚು ಸಹಿತ ಒಟ್ಟು 19 ಪದಕಗಳನ್ನು ಜಯಿಸಿತ್ತು. ಈ ಬಾರಿ ಭಾರತವು ಪದಕಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಪ್ಯಾರಾಲಿಂಪಿಕ್ಸ್-2024ರಲ್ಲಿ ಭಾಗವಹಿಸಲಿರುವ ಅಥ್ಲೀಟ್‌ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಪ್ಯಾರಾ ಆರ್ಚರಿ(6): ಹರ್ವಿಂದರ್ ಸಿಂಗ್-ಪುರುಷರ ವೈಯಕ್ತಿಕ ರಿಕರ್ವ್ ಓಪನ್, ಮಿಕ್ಸೆಡ್ ಟೀಮ್ ರಿಕರ್ವ್ ಓಪನ್(ಎಸ್‌ಟಿ ವಿಭಾಗ)

ರಾಕೇಶ್ ಕುಮಾರ್-ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್, ಮಿಕ್ಸೆಡ್ ಟೀಮ್ ಕಾಂಪೌಂಡ್ ಓಪನ್(ಡಬ್ಲ್ಯು2 ವಿಭಾಗ)

ಶ್ಯಾಮ್ ಸುಂದರ್ ಸ್ವಾಮಿ-ಪುರುಷರ ವೈಯಕ್ತಿಕ ಕಾಂಪೌಂಡ್ ಓಪನ್, ಮಿಕ್ಸೆಡ್ ಟೀಮ್ ಕಾಂಪೌಂಡ್ ಓಪನ್(ಎಸ್‌ಟಿ ವಿಭಾಗ)

ಪೂಜಾ-ಮಹಿಳೆಯರ ವೈಯಕ್ತಿಕ ರಿಕರ್ವ್ ಓಪನ್, ಮಿಕ್ಸೆಡ್ ಟೀಮ್ ರಿಕರ್ವ್ ಓಪನ್(ಎಸ್‌ಟಿ ವಿಭಾಗ)

ಸರಿತಾ-ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್, ಮಿಕ್ಸೆಡ್ ಟೀಮ್ ಕಾಂಪೌಂಡ್ ಓಪನ್(ವಿಭಾಗ-ಡಬ್ಲ್ಯು 2)

ಶೀತಲ್ ದೇವಿ-ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್, ಮಿಕ್ಸೆಡ್ ಟೀಮ್ ಕಾಂಪೌಂಡ್ ಓಪನ್(ಎಸ್‌ಟಿ ವಿಭಾಗ)

ಪ್ಯಾರಾ ಅಥ್ಲೆಟಿಕ್ಸ್(38)

ದೀಪ್ತಿ ಜೀವನ್‌ಜಿ-ಮಹಿಳೆಯರ 400 ಮೀ.-ಟಿ20, ಸುಮಿತ್ ಅಂಟಿಲ್-ಪುರುಷರ ಜಾವೆಲಿನ್ ಎಸೆತ-ಎಫ್‌64, ಸಂದೀಪ್-ಪುರುಷರ ಜಾವೆಲಿನ್ ಎಸೆತ-ಎಫ್ 64, ಅಜೀತ್ ಸಿಂಗ್-ಪುರುಷರ ಜಾವೆಲಿನ್ ಎಸೆತ-ಎಫ್ 46, ಸುಂದರ್ ಸಿಂಗ್ ಗುರ್ಜರ್-ಪುರುಷರ ಜಾವೆಲಿನ್ ಎಸೆತ-ಎಫ್‌46, ರಿಂಕು-ಪುರುಷರ ಜಾವೆಲಿನ್ ಎಸೆತ-ಎಫ್ 46, ನವದೀಪ್-ಪುರುಷರ ಜಾವೆಲಿನ್ ಎಸೆತ-ಎಫ್ 41, ಯೋಗೇಶ್ ಕಥುನಿಯಾ-ಪುರುಷರ ಡಿಸ್ಕಸ್ ಎಸೆತ-ಎಫ್ 56, ಧರಂಬೀರ್-ಪುರುಷರ ಕ್ಲಬ್ ಥ್ರೋ-ಎಫ್‌51, ಪ್ರಣವ್ ಸೂರ್ಮಾ-ಪುರುಷರ ಕ್ಲಬ್ ಥ್ರೋ-ಎಫ್ 51, ಅಮಿತ್ ಕುಮಾರ್-ಪುರುಷರ ಕ್ಲಬ್ ಥ್ರೋ-ಎಫ್ 51, ನಿಶಾದ್ ಕುಮಾರ್-ಪುರುಷರ ಹೈಜಂಪ್-ಟಿ47, ರಾಮ್ ಪಾಲ್-ಪುರುಷರ ಹೈಜಂಪ್-ಟಿ47, ಮರಿಯಪ್ಪನ್ ತಂಗವೇಲು-ಪುರುಷರ ಹೈಜಂಪ್-ಟಿ63, ಶೈಲೇಶ್ ಕುಮಾರ್-ಪುರುಷರ ಹೈಜಂಪ್-ಟಿ63, ಶರದ್ ಕುಮಾರ್-ಪುರುಷರ ಹೈಜಂಪ್-ಟಿ63, ಸಚಿನ್ ಸರ್ಜೆರಾವ್-ಪುರುಷರ ಶಾಟ್‌ಪುಟ್-ಎಫ್ 46, ಮುಹಮ್ಮದ್ ಯಾಸಿರ್-ಪುರುಷರ ಶಾಟ್‌ಪುಟ್-ಎಫ್ 46, ರೋಹಿತ್ ಕುಮಾರ್-ಪುರುಷರ ಶಾಟ್‌ಪುಟ್-ಎಫ್ 46, ಪ್ರೀತಿ ಪಾಲ್-ಮಹಿಳೆಯರ 100 ಮೀ.-ಟಿ35, ಮಹಿಳೆಯರ 200 ಮೀ-ಟಿ35, ಭಾಗ್ಯಶ್ರೀ ಜಾಧವ್-ಮಹಿಳೆಯರ ಶಾಟ್‌ಪುಟ್-ಎಫ್ 34, ಮನು-ಪುರುಷರ ಶಾಟ್‌ಪುಟ್-ಎಫ್ 37, ಪರ್ವೀನ್ ಕುಮಾರ್-ಪುರುಷರ ಜಾವೆಲಿನ್ ಎಸೆತ-ಎಫ್ 57, ರವಿ ರಂಗೋಲಿ-ಪುರುಷರ ಶಾಟ್‌ಪುಟ್-ಎಫ್ 40, ಸಂದೀಪ್ ಸಂಜಯ್-ಪುರುಷರ ಜಾವೆಲಿನ್ ಎಸೆತ-ಎಫ್ 64, ಅರವಿಂದ್-ಪುರುಷರ ಶಾಟ್‌ಪುಟ್-ಎಫ್ 35, ದೀಪೇಶ್ ಕುಮಾರ್-ಪುರುಷರ ಜಾವೆಲಿನ್ ಎಸೆತ-ಎಫ್ 54, ಪ್ರವೀಣ್ ಕುಮಾರ್-ಪುರುಷರ ಹೈಜಂಪ್-ಟಿ64, ದಿಲಿಪ್ ಗವಿತ್-ಪುರುಷರ 400 ಮೀ.-ಟಿ47, ಸೋಮನ್ ರಾಣಾ-ಪುರುಷರ ಶಾಟ್‌ಪುಟ್-ಎಫ್ 57, ಹೊಕಾಟೊ ಸೀಮಾ-ಪುರುಷರ ಶಾಟ್‌ಪುಟ್-ಎಫ್ 57, ಸಾಕ್ಷಿ ಕಸಾನಾ-ಮಹಿಳೆಯರ ಡಿಸ್ಕಸ್ ಎಸೆತ-ಎಫ್ 55, ಕರಮ್‌ಜ್ಯೋತಿ-ಮಹಿಳೆಯರ ಡಿಸ್ಕಸ್ ಎಸೆತ-ಎಫ್ 55, ರಕ್ಷಿತಾ ರಾಜು-ಮಹಿಳೆಯರ 1500 ಮೀ. ಟಿ11, ಅಮಿಶಾ ರಾವತ್-ಮಹಿಳೆಯರ ಶಾಟ್‌ಪುಟ್-ಎಫ್ 46, ಭಾವನಾಬೆನ್ ಚೌಧರಿ-ಮಹಿಳೆಯರ ಜಾವೆಲಿನ್ ಎಸೆತ-ಎಫ್ 46, ಸಿಮ್ರಾನ್-ಮಹಿಳೆಯರ 100 ಮೀ.ಟಿ12, ಮಹಿಳೆಯರ 200 ಮೀ. ಟಿ12, ಕಾಂಚನ್ ಲಖಾನಿ-ಮಹಿಳೆಯರ ಡಿಸ್ಕಸ್ ಎಸೆತ-ಎಫ್ 53.

ಪ್ಯಾರಾ ಬ್ಯಾಡ್ಮಿಂಟನ್(13)

ಮನೋಜ್ ಸರ್ಕಾರ್-ಪುರುಷರ ಸಿಂಗಲ್ಸ್ ಎಸ್‌ಎಲ್‌3, ನಿತೇಶ್ ಕುಮಾರ್-ಪುರುಷರ ಸಿಂಗಲ್ಸ್ ಎಸ್‌ಎಲ್‌3, ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5, ಕೃಷ್ಣ ನಗರ್-ಪುರುಷರ ಸಿಂಗಲ್ಸ್ ಎಸ್‌ಎಚ್‌6,ಸಿವರಾಜನ್ ಸೊಲೈಮಲೈ-ಪುರುಷರ ಸಿಂಗಲ್ಸ್ ಎಸ್‌ಎಚ್‌6, ಮಿಕ್ಸೆಡ್ ಡಬಲ್ಸ್ ಎಸ್‌ಎಚ್ 6, ಸುಹಾಸ್ ಯತಿರಾಜ್-ಪುರುಷರ ಸಿಂಗಲ್ಸ್ ಎಸ್‌ಎಲ್ 4, ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5, ಸುಕಾಂತ್ ಕದಂ-ಪುರುಷರ ಸಿಂಗಲ್ಸ್ ಎಸ್‌4, ತರುಣ್-ಪುರುಷರ ಸಿಂಗಲ್ಸ್ ಎಸ್‌4, ಮಾನಸಿ ಜೋಶಿ-ಮಹಿಳೆಯರ ಸಿಂಗಲ್ಸ್ ಎಸ್‌ಎಲ್‌3,ಮನ್‌ದೀಪ್ ಕೌರ್-ಮಹಿಳೆಯರ ಸಿಂಗಲ್ಸ್ ಎಸ್ ಎಲ್ 3, ಪಾಲಕ್ ಕೊಹ್ಲಿ-ಮಹಿಳೆಯರ ಸಿಂಗಲ್ಸ್ ಎಸ್‌ಎಲ್‌4, ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5, ಮನಿಶಾ ರಾಮ್‌ದಾಸ್-ಮಹಿಳೆಯರ ಸಿಂಗಲ್ಸ್ ಎಸ್‌ಯು5, ತುಳಸಿಮತಿ ಮುರುಗನ್-ಮಹಿಳೆಯರ ಸಿಂಗಲ್ಸ್ ಎಸ್‌ಯು5, ಮಿಕ್ಸೆಡ್ ಡಬಲ್ಸ್ ಎಸ್‌ಎಲ್‌3-ಎಸ್‌ಯು5, ನಿತ್ಯ ಶ್ರೀ ಸಿವಾನ್-ಮಹಿಳೆಯರ ಸಿಂಗಲ್ಸ್ ಎಸ್‌ಎಚ್‌6, ಮಿಕ್ಸೆಡ್ ಡಬಲ್ಸ್ ಎಸ್‌ಎಚ್‌6

ಪ್ಯಾರಾ ಕ್ಯಾನೊ(3)

ಪ್ರಾಚಿ ಯಾದವ್-ಮಹಿಳೆಯರ ಸಿಂಗಲ್ಸ್ 200 ಮೀ. ವಿಎಲ್‌2, ಯಶ್ ಕುಮಾರ್-ಪುರುಷರ ಕಾಯಕ್ ಸಿಂಗಲ್ 200 ಮೀ.-ಕೆಎಲ್‌1, ಪೂಜಾ ಓಜಾ-ಮಹಿಳೆಯರ ಕಾಯಕ್ ಸಿಂಗಲ್ 200 ಮೀ.-ಕೆಎಲ್‌1

ಪ್ಯಾರಾ ಸೈಕ್ಲಿಂಗ್(2)

ಅರ್ಷದ್ ಶೇಕ್, ಜ್ಯೋತಿ ಗಡೇರಿಯಾ

ಬ್ಲೈಂಡ್ ಜುಡೊ(2)

ಕಪಿಲ್ ಪಾರ್ಮರ್: ಪುರುಷರ 60ಕೆಜಿ ಜೆ1, ಕೊಕಿಲಾ:ಮಹಿಳೆಯರ-48ಕೆಜಿ ಜೆ2

ಪ್ಯಾರಾ ಪವರ್‌ಲಿಫ್ಟಿಂಗ್(4)

ಪರಮ್‌ಜೀತ್ ಕುಮಾರ್-ಪುರುಷರ 49ಕೆಜಿ ತನಕ, ಅಶೋಕ್-ಪುರುಷರ 63 ಕೆಜಿ ತನಕ, ಕಸ್ತೂರಿ ರಾಜಮಣಿ-ಮಹಿಳೆಯರ 67ಕೆಜಿ ತನಕ.

ಪ್ಯಾರಾ ರೋವಿಂಗ್(2): ಅನಿತಾ-ಪಿಆರ್‌3 ಮಿಕ್ಸೆಡ್ ಡಬಲ್ ಸ್ಕಲ್ಸ್-ಪಿಆರ್‌3ಮಿಕ್ಸ್‌2ಎಕ್ಸ್, ನಾರಾಯಣ-ಪಿಆರ್‌ 3 ಮಿಕ್ಸೆಡ್‌ ಡಬಲ್

ಸ್ಕಲ್ಸ್

ಪ್ಯಾರಾ ಶೂಟಿಂಗ್(10)

ಅವನಿ ಲೇಖರ: ಆರ್‌2-ಮಹಿಳೆಯರ 10 ಮೀ. ಏರ್‌ರೈಫಲ್ ಸ್ಟ್ಯಾಂಡರ್ಡ್ ಎಸ್‌ಎಚ್‌1, ಆರ್‌3-ಮಿಕ್ಸೆಡ್ 10 ಮೀ.ಏರ್ ರೈಫಲ್‌ಪ್ರೊನ್ ಎಸ್‌ಎಸ್‌1, ಆರ್‌8-ಮಹಿಳೆಯರ 50ಮೀ.ರೈಫಲ್‌3 ಪೊಸಿಶನ್ಸ್.ಎಸ್‌ಎಚ್‌1

ಮೋನಾ ಅಗರ್ವಾಲ್: ಆರ್‌2-ಮಹಿಳೆಯರ 10ಮೀ.ಏರ್‌ರೈಫಲ್ ಸ್ಟ್ಯಾಂಡರ್ಡ್ ಎಸ್‌ಎಚ್‌1, ಆರ್‌6-ಮಿಕ್ಸೆಡ್ 50ಮೀ.ರೈಫಲ್ ಪ್ರೋನ್ ಎಸ್‌ಎಚ್‌1, ಆರ್‌8-ಮಹಿಳೆಯರ 50ಮೀ.ರೈಫಲ್‌3 ಪೊಸಿಶನ್ಸ್ ಎಸ್‌ಎಚ್‌1

ನಿಹಾಲ್ ಸಿಂಗ್-ಪಿ3-ಮಿಕ್ಸೆಡ್ 25 ಮೀ.ಪಿಸ್ತೂಲ್, ಪಿ4, ಮಿಕ್ಸೆಡ್ 50ಮೀ.ಪಿಸ್ತೂಲ್

ಮನಿಶಾ ನರ್ವಾಲ್:ಪಿ1 ಪುರುಷರ 10ಮೀ. ಏರ್ ಪಿಸ್ತೂಲ್ ಎಸ್‌ಎಚ್‌1, ರುದ್ರಾಂಶ್ ಖಂಡೇಲ್‌ವಾಲ್:ಪಿ1-ಪುರುಷರ 10ಮೀ.ಏರ್ ಪಿಸ್ತೂಲ್ ಎಸ್‌ಎಚ್‌1, ಪಿ4-ಮಿಕ್ಸೆಡ್ 50 ಮೀ.ಪಿಸ್ತೂಲ್ ಎಸ್‌ಎಚ್‌1

ಸಿದ್ದಾರ್ಥ ಬಾಬು: ಆರ್‌3-ಮಿಕ್ಸೆಡ್ 10ಮೀ.ಏರ್ ಪ್ರೊನ್‌ಎಸ್‌ಎಚ್‌1, ಆರ್‌6-ಮಿಕ್ಸೆಡ್ 50ಮೀ.ರೈಫಲ್ ಪ್ರೊನ್

ಶ್ರೀಹರ್ಷ ದೇವರಡ್ಡಿ-ಆರ್‌4-ಮಿಕ್ಸೆಡ್ 10 ಮೀ. ಏರ್ ರೈಫಲ್, ಆರ್‌5-ಮಿಕ್ಸೆಡ್ 10 ಮೀ. ಏರ್ ರೈಫಲ್ ಎಸ್‌ಎಚ್‌2

ಸ್ವರೂಪ್ ಮಹಾವೀರ್-ಆರ್‌1-ಪುರುಷರ 10 ಮೀ.ಏರ್‌ರೈಫಲ್. ರುಬಿನಾ ಫ್ರಾನ್ಸಿಸ್:ಪಿ2-ಮಹಿಳೆಯರ 10ಮೀ. ಏರ್ ಪಿಸ್ತೂಲ್

ಪ್ಯಾರಾ ಸ್ವಿಮ್ಮಿಂಗ್(1): ಸುಯಶ್ ನಾರಾಯಣ್-ಪುರುಷರ 50 ಮೀ. ಬಟರ್‌ಫ್ಲೈ

ಪ್ಯಾರಾ ಟೇಬಲ್ ಟೆನಿಸ್(2): ಸೋನಲ್‌ಬೆನ್ ಪಟೇಲ್-ಮಹಿಳೆಯರ ಸಿಂಗಲ್ಸ್-ಡಬ್ಲ್ಯುಎಸ್‌3, ಮಹಿಳೆಯರ ಡಬಲ್ಸ್

ಭಾವನಾಬೆನ್ ಪಟೇಲ್-ಮಹಿಳೆೆಯರ ಸಿಂಗಲ್ಸ್ -ಮಹಿಳೆಯರ ಡಬಲ್ಸ್

ಪ್ಯಾರಾ ಟಕ್ವಾಂಡೊ(1): ಅರುಣಾ-ಮಹಿಳೆಯರ ಕೆ44-47ಕೆಜಿ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News