ಪೌಲ್ ಪೊಗ್ಬ ನಿಷೇಧ 18 ತಿಂಗಳಿಗೆ ಇಳಿಸಿದ ಕ್ರೀಡಾ ಪಂಚಾಯಿತಿ ನ್ಯಾಯಾಲಯ

Update: 2024-10-05 16:01 GMT

ಪೌಲ್ ಪೊಗ್ಬ |  PC : NDTV 

ಪ್ಯಾರಿಸ್ : ಉದ್ದೀಪನ ದ್ರವ್ಯ ಸೇವನೆಗಾಗಿ ಫ್ರಾನ್ಸ್ ಫುಟ್ಬಾಲ್ ಆಟಗಾರ ಪೌಲ್ ಪೊಗ್ಬರಿಗೆ ವಿಧಿಸಲಾಗಿರುವ ನಾಲ್ಕು ವರ್ಷಗಳ ನಿಷೇಧವನ್ನು ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್)ವು 18 ತಿಂಗಳಿಗೆ ಇಳಿಸಿದೆ.

ಹಾಗಾಗಿ, ಫ್ರಾನ್ಸ್‌ನ ವಿಶ್ವಕಪ್ ವಿಜೇತ ತಂಡದ ಆಟಗಾರ ಪೊಗ್ಬ 2025 ಮಾರ್ಚ್‌ನಲ್ಲಿ ದೇಶದ ಪರವಾಗಿ ಆಡಲು ಲಭ್ಯರಿರುತ್ತಾರೆ.

‘‘ಕೊನೆಗೂ ದುಃಸ್ವಪ್ನಗಳು ಕೊನೆಗೊಂಡಿವೆ’’ ಎಂದು ಪೊಗ್ಬ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ‘‘ಕ್ರೀಡಾ ಪಂಚಾಯಿತಿ ನ್ಯಾಯಾಲಯದ ತೀರ್ಪಿನ ಬಳಿಕ, ನನ್ನ ಕನಸುಗಳನ್ನು ಸಾಕಾರಗೊಳಿಸುವ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಜುವೆಂಟಸ್ ಕ್ಲಬ್‌ನಲ್ಲಿ ಮಿಡ್‌ಫೀಲ್ಡರ್ ಆಗಿರುವ ಪೊಗ್ಬ ಟೆಸ್ಟಸ್ಟಿರೋನ್ ದ್ರವ್ಯ ತೆಗೆದುಕೊಂಡಿರುವುದು ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಹಾಗಾಗಿ, ಇಟಲಿಯ ಮಾದಕ ದ್ರವ್ಯ ನಿಗ್ರಹ ನ್ಯಾಯಾಲಯವು ಅವರಿಗೆ ಗರಿಷ್ಠ ಶಿಕ್ಷೆ ನೀಡಿತ್ತು.

ನ್ಯಾಯಾಲಯದ ತೀರ್ಪು ಸರಿಯಲ್ಲ ಎಂದು ಪೊಗ್ಬ ಹೇಳಿದ್ದರು ಹಾಗೂ ಸ್ವಿಟ್ಸರ್‌ಲ್ಯಾಂಡ್‌ನ ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿ ತನ್ನ ವಿರುದ್ಧದ ತೀರ್ಪನ್ನು ಪ್ರಶ್ನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News