ಪ್ರೊ ಕಬಡ್ಡಿ ಲೀಗ್‌: 2 ಪಂದ್ಯ ಸೋತಿರುವ ಬೆಂಗಳೂರು ಬುಲ್ಸ್‌ಗೆ ತವರಲ್ಲಿ ಗೆಲುವಿನ ಖಾತೆ ತೆರೆಯುವ ತವಕ

Update: 2023-12-07 12:48 GMT

ಬೆಂಗಳೂರು: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಆತಿಥ್ಯ ವಹಿಸಲು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದೆ. ಟೂರ್ನಿಯ ಮೊದಲ ಚರಣದ ಪಂದ್ಯಗಳು ಡಿ.2ರಿಂದ ಅಹಮದಾಬಾದ್‌ನಲ್ಲಿ ಆರಂಭಗೊಂಡಿದ್ದು, ಡಿ.8ರ ಬಳಿಕ ಪಂದ್ಯಾವಳಿ ಬೆಂಗಳೂರಿನ ಅಭಿಮಾನಿಗಳ ಮನರಂಜಿಸಲಿದೆ.

ಡಿ.13ರ ವರೆಗೂ ಅಂದರೆ 6 ದಿನಗಳ ಕಾಲ ಒಟ್ಟು 11 ಪಂದ್ಯಗಳು ನಗರದಲ್ಲಿ ನಡೆಯಲಿವೆ.

ಬುಲ್ ಕೋಚ್ ರಣದೀಪ್ ಸಿಂಗ್, ನಾಯಕ ಸೌರಬ್ ನಂದಲ್, ತಾರಾ ಆಟಗಾರರಾದ ಭರತ್, ವಿಕಾಸ್ ಖಂಡೋಲಾ, ಸುರ್ಜೀಂತ್ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಬಾರಿಗಿಂತ ಈ ವರ್ಷ ಉತ್ತಮ ತಂಡ ಹೊಂದಿದ್ದೇವೆ ಎಂದ ರಣದೀಪ್, ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಮುಂಬರುವ ಪಂದ್ಯಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಸೌರಭ್ ಮಾತನಾಡಿ 'ಕಳೆದೆರಡು ಪಂದ್ಯಗಳಲ್ಲಿ ತಪ್ಪುಗಳಾಗಿವೆ. ಆದರೆ ಅದು ಮರುಕಳಿಸಲ್ಲ. ಒಗ್ಗಟ್ಟಿನಿಂದ ಆಡಿ ಗೆಲ್ಲುತ್ತೇವೆ' ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News