ಶೇನ್ ವಾರ್ನ್ ಅವರ 18 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಆರ್.ಅಶ್ವಿನ್
ಚೆನ್ನೈ: ಟೆಸ್ಟ್ ಕ್ರಿಕೆಟ್‌ನಲ್ಲಿ 37ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿರುವ ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯದ ಲೆಜೆಂಡ್ ಶೇನ್ ವಾರ್ನರ್ ಅವರ 18 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಗ ನಿಧನರಾಗಿರುವ ವಾರ್ನ್ 2006ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಐದು ವಿಕೆಟ್ ಪಡೆದಿದ್ದರು.
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 88 ರನ್‌ಗೆ 6 ವಿಕೆಟ್‌ಗಳನ್ನು ಉರುಳಿಸಿರುವ ಅಶ್ವಿನ್ ಭಾರತವು 280 ರನ್‌ನಿಂದ ಗೆಲುವು ಸಾಧಿಸಲು ನೆರವಾಗಿದ್ದರು.
ಈ ಸಾಧನೆಯ ಮೂಲಕ ಅಶ್ವಿನ್ ಅವರು ಹೆಚ್ಚು ಐದು ವಿಕೆಟ್ ಗೊಂಚಲು ಪಡೆದಿರುವ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ವಾರ್ನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 67 ಬಾರಿ ಐದು ವಿಕೆಟ್ ಗೊಂಚಲು ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.
ಬಾಂಗ್ಲಾದೇಶದ ಮೊದಲ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್ ಪಡೆಯದ ಅಶ್ವಿನ್, ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ಶತಕ ಸಿಡಿಸಿ ಮಿಂಚಿದ್ದರು.
ಅಶ್ವಿನ್‌ರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದಾಗಿ ಭಾರತವು ಮೊದಲ ಪಂದ್ಯವನ್ನು ಜಯಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಐದು ವಿಕೆಟ್ ಗೊಂಚಲು ಪಡೆದು ವಾರ್ನ್ ಅವರ ದಾಖಲೆಯನ್ನು ಸರಿದೂಗಿಸಿದ ಅಶ್ವಿನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓರ್ವ ಶ್ರೇಷ್ಠ ಸ್ಪಿನ್ನರ್ ಎಂಬ ಸ್ಥಾನಮಾನ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲು ಪಡೆದ ಬೌಲರ್‌ಗಳು
1)ಮುತ್ತಯ್ಯ ಮುರಳೀಧರನ್(ಶ್ರೀಲಂಕಾ)-67
2)ರವಿಚಂದ್ರನ್ ಅಶ್ವಿನ್(ಭಾರತ)-37
3)ಶೇನ್ ವಾರ್ನ್(ಆಸ್ಟ್ರೇಲಿಯ)-37
4)ರಿಚರ್ಡ್ ಹ್ಯಾಡ್ಲಿ(ನ್ಯೂಝಿಲ್ಯಾಂಡ್)-36
5) ಅನಿಲ್ ಕುಂಬ್ಳೆ(ಭಾರತ)-35