ಆಸ್ಟ್ರೇಲಿಯ ವಿರುದ್ಧದ ಮೂರನೆಯ ಟೆಸ್ಟ್: ಮೊದಲ ದಿನದಾಟ ಮಳೆಗಾಹುತಿ
Update: 2024-12-14 07:19 GMT
ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೆ ಪಂದ್ಯದ ಮೊದಲ ದಿನ ವರುಣನ ಕಾಟಕ್ಕೆ ತುತ್ತಾಗಿದೆ.
ಟಾಸ್ ಮಾಡಿ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ, 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದ್ದಾಗ ಮಳೆ ಶುರುವಾಗಿದೆ. ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
19 ರನ್ ಗಳಿಸಿರುವ ಉಸ್ಮಾನ್ ಖ್ವಾಜಾ ಹಾಗೂ 4 ರನ್ ಗಳಿಸಿರುವ ಮೆಕ್ ಸ್ವೀನೆ ಕ್ರೀಸಿನಲ್ಲಿದ್ದಾರೆ.