ಜಮ್ಮು-ಕಾಶ್ಮೀರದ ವಿರುದ್ಧ ರಣಜಿ ಟ್ರೋಫಿ ಪಂದ್ಯ | ಮುಂಬೈ ತಂಡದಲ್ಲಿ ರೋಹಿತ್, ಜೈಸ್ವಾಲ್‌ಗೆ ಸ್ಥಾನ

Update: 2025-01-20 21:11 IST
Rohit, Jaiswal

ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ | PTI  

  • whatsapp icon

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಜನವರಿ 23ರಿಂದ ಆರಂಭವಾಗಲಿರುವ 2ನೇ ಹಂತದ ರಣಜಿ ಟ್ರೋಫಿಯಲ್ಲಿ ಜಮ್ಮು-ಕಾಶ್ಮೀರ ತಂಡದ ವಿರುದ್ಧ ಪಂದ್ಯಕ್ಕೆ ಆಯ್ಕೆ ಮಾಡಿರುವ 17 ಸದಸ್ಯರುಗಳನ್ನು ಒಳಗೊಂಡ ಮುಂಬೈ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡ ಮುಂಬೈನ ಎಂಸಿಎ-ಬಿಕೆಸಿ ಮೈದಾನದಲ್ಲಿ ನಡೆಯಲಿರುವ ರಣಜಿ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಅಜಿಂಕ್ಯ ರಹಾನೆ ನೇತೃತ್ವದ ತಂಡದಲ್ಲಿ ಶಿವಂ ದುಬೆ, ಶ್ರೇಯಸ್ ಅಯ್ಯರ್ ಹಾಗೂ ಶಾರ್ದೂಲ್ ಠಾಕೂರ್ ಅವರಿದ್ದಾರೆ.

5 ಪಂದ್ಯಗಳಲ್ಲಿ 22 ಅಂಕ ಗಳಿಸಿರುವ ಮುಂಬೈ ತಂಡವು ಎ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. 27 ಅಂಕ ಗಳಿಸಿರುವ ಬರೋಡಾ ತಂಡ ಮೊದಲ ಸ್ಥಾನದಲ್ಲಿದೆ.

*ಮುಂಬೈ ರಣಜಿ ಟ್ರೋಫಿ ತಂಡ: ಅಜಿಂಕ್ಯ ರಹಾನೆ(ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಆಯುಷ್ ಮ್ಹಾತ್ರೆ, ಶ್ರೇಯಸ್ ಅಯ್ಯರ್, ಸಿದ್ದೇಶ್ ಲಾಡ್, ಶಿವಂ ದುಬೆ, ಹಾರ್ದಿಕ್ ಟಾಮೋರ್(ವಿಕೆಟ್‌ಕೀಪರ್), ಆಕಾಶ್ ಆನಂದ್(ವಿಕೆಟ್‌ಕೀಪರ್), ತನುಶ್ ಕೋಟ್ಯಾನ್, ಶಮ್ಸ್ ಮುಲಾನಿ, ಹಿಮಾಂಶು ಸಿಂಗ್, ಶಾರ್ದೂಲ್ ಠಾಕೂರ್, ಮೋಹಿತ್ ಅವಸ್ಥಿ, ಸಿಲ್‌ವೆಸ್ಟರ್ ಡಿಸೋಜಾ, ರಾಯ್‌ಸ್ಟನ್ ಡಯಾಸ್, ಕಾರ್ಶ್ ಕೊಥಾರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News