ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜಾ

Update: 2024-06-30 11:58 GMT

Photo : IG/@royalnavghan

ಮುಂಬೈ : ಟಿ20 ವಿಶ್ವಕಪ್ ನಲ್ಲಿ ಭಾರತ ಚಾಂಪಿಯನ್ ಆದ ಬೆನ್ನಿಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾದಿಯಲ್ಲಿ ರವೀಂದ್ರ ಜಡೇಜ ಕೂಡ ಸಾಗಿದ್ದಾರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ರವಿವಾರ ನಿವೃತ್ತಿ ಘೋಷಿಸಿದ್ದಾರೆ.

ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯ ಸಾಧಿಸಿದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ ಆಲ್‌ರೌಂಡರ್ ರವೀಂದ್ರ ಜಡೇಜಾ, ಇನ್ಸ್ಟಾಗ್ರಾಂ ಮೂಲಕ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

“ಧನ್ಯವಾದಗಳು, ತುಂಬಿದ ಹೃದಯದಿಂದ ನಾನು ಟೊ20 ಅಂತರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ಇತರ ಮಾದರಿ ಕ್ರಿಕೆಟಗಳಲ್ಲಿ ನಾನು ಮುಂದುವರೆಯಲಿದ್ದೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು. ಇದು ನನ್ನ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ ಮೈಲಿಗಲ್ಲು. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು”ಎಂದು ಜಡೇಜಾ ಪೋಸ್ಟ್ ಮಾಡಿದ್ದಾರೆ.

ಸ್ಪಿನ್-ಬೌಲರ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ ಅವರು ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡಕ್ಕೆ ಪ್ರವೇಶ ಪಡೆದರು. ಆ ಬಳಿಕ ಅವರು ಕ್ರಿಕೆಟ್ ಅಂಗಣದಲ್ಲಿ ಬಹು ದೂರ ಸಾಗಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News