ಜಾವಗಲ್ ಶ್ರೀನಾಥ್ ದಾಖಲೆ ಮುರಿದ ರವೀಂದ್ರ ಜಡೇಜ

Update: 2024-01-27 17:33 GMT

Photo : x/@@WisdenIndia

ಹೈದರಾಬಾದ್ : ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆರನೇ ಭಾರತೀಯ ಬೌಲರ್ ಎನಿಸುವ ಮೂಲಕ ರವೀಂದ್ರ ಜಡೇಜ ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಟೂರ್ನಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಬೈರ್ ಸ್ಟೋವ್ ಅವರ ವಿಕೆಟ್ ಪಡೆದು ಜಡೇಜ ಈ ದಾಖಲೆಗೆ ಪಾತ್ರರಾಗಿದ್ದಾರೆ.

ಇದುವರೆಗೆ ಎಲ್ಲಾ ಮೂರು ಮಾದರಿಗಳಲ್ಲಿ 332 ಪಂದ್ಯಗಳನ್ನು ಆಡಿರುವ ಜಡೇಜ 552 ವಿಕೆಟ್ ಗಳನ್ನು ಪಡೆದಿದ್ದಾರೆ. ಶ್ರೀನಾಥ್ ಅವರು ತಮ್ಮ ಅಂತರ್ರಾಷ್ಟ್ರೀಯ ವೃತ್ತಿ ಜೀವನದಲ್ಲಿ 551 ವಿಕೆಟ್ ಕಬಳಿಸಿದ್ದಾರೆ.

ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಪರೂಪದ ಸಾಧನೆಗಳ ಪಟ್ಟಿಯಲ್ಲಿ 953 ವಿಕೆಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಅನುಭವಿ ರವಿಚಂದ್ರನ್ ಅಶ್ವಿನ್ 723 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಹರ್ಭಜನ್ ಸಿಂಗ್ 707, ಕಪಿಲ್ ದೇವ್ 687, ಝಹೀರ್ ಖಾನ್ 597 ಪಡೆದು ಮೊದಲ ಐದು ಸ್ಥಾನಗಳಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News