ರಣಜಿ ಟ್ರೋಫಿ: ಕೇರಳ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕ

Update: 2023-12-24 18:16 GMT

Sanju samson, Photo: BCCI

ಕೊಚ್ಚಿ : ಮುಂಬರುವ ಋತುವಿನ ರಣಜಿ ಟ್ರೋಫಿ ಟೂರ್ನಿಗೆ ಕೇರಳ ತಂಡವನ್ನು ಸಂಜು ಸ್ಯಾಮ್ಸನ್ ನಾಯಕನಾಗಿ ಮುನ್ನಡೆಸಲಿದ್ದು, ಮೊದಲೆರಡು ಪಂದ್ಯಗಳಿಗೆ ಮೂವರು ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ.

ನಿರೀಕ್ಷೆಯಂತೆಯೇ ಸ್ಯಾಮ್ಸನ್ರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಆರಂಭಿಕ ಆಟಗಾರ ರೋಶನ್ ಕನ್ನುಮ್ಮಲ್ ಉಪ ನಾಯಕನಾಗಿದ್ದಾರೆ.

ಸೀಮಿತ ಓವರ್ ಕ್ರಿಕೆಟ್ನಲ್ಲಿ ಕೇರಳದ ಪರ ಉತ್ತಮ ಪ್ರದರ್ಶನ ನೀಡಿರುವ ಕೃಷ್ಣ ಪ್ರಸಾದ್ರನ್ನು ರಣಜಿಗೆ ಆಯ್ಕೆ ಮಾಡಲಾಗಿದೆ. ಕೃಷ್ಣ ಪ್ರಸಾದ್ ಜೊತೆಗೆ ಮಲ್ಲಪ್ಪುರಂನ ಆನಂದ್ ಕೃಷ್ಣನ್ ಹಾಗೂ ಅಲಪ್ಪುಳದ ವಿಕೆಟ್ಕೀಪರ್-ಬ್ಯಾಟರ್ ವಿಷ್ಣು ರಾಜ್ ಆಯ್ಕೆಯಾಗಿದ್ದಾರೆ.

ಆಕ್ರಮಣಕಾರಿ ಮಧ್ಯಮ ಸರದಿ ಬ್ಯಾಟರ್ ವಿಷ್ಣು ವಿನೋದ್ ರಣಜಿಗೆ ವಾಪಸಾಗಿದ್ದಾರೆ. ಹಿರಿಯ ಆಟಗಾರರಾದ ಸಚಿನ್ ಬೇಬಿ ಹಾಗೂ ರೋಹನ್ ಪ್ರೇಮ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಜಲಜ್ ಸಕ್ಸೇನ ಹಾಗೂ ಶ್ರೇಯಸ್ ಗೋಪಾಲ್ ತಂಡದಲ್ಲಿರುವ ಇಬ್ಬರು ವೃತ್ತಿಪರ ಅತಿಥಿ ಆಟಗಾರರಾಗಿದ್ದಾರೆ.

ಕೇರಳ ಜನವರಿ 5ರಂದು ಉತ್ತರಪ್ರದೇಶವನ್ನು ಎದುರಿಸುವ ಮೂಲಕ ತನ್ನ ರಣಜಿ ಅಭಿಯಾನ ಆರಂಭಿಸಲಿದೆ. ವಾರದ ನಂತರ ಗುವಾಹಟಿಯಲ್ಲಿ ಅಸ್ಸಾಂ ವಿರುದ್ಧ ತನ್ನ 2ನೇ ಪಂದ್ಯವನ್ನು ಆಡಲಿದೆ.

ಕೇರಳ ತಂಡವು ಹೊಸ ಕೋಚ್ ವೆಂಕಟರಮಣ ಕೋಚಿಂಗ್ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ-20 ಹಾಗೂ ವಿಜಯ್ ಹಝಾರೆ ಟ್ರೋಫಿಯ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News