ವಿಂಡೀಸ್‌ನ ಯುವ ಕ್ರಿಕೆಟಿಗನಿಗೆ ಬ್ಯಾಟ್, ಶೂ ಉಡುಗೊರೆ ನೀಡಿದ ಸಿರಾಜ್

Update: 2023-07-07 15:07 GMT

Photo Source: Twitter/BCCI

ಹೊಸದಿಲ್ಲಿ, ಜು.7: ಭಾರತದ ಸ್ಟಾರ್ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮುಂಬರುವ ಬಾರ್ಬಡೋಸ್‌ನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪ್ರಾಕ್ಟೀಸ್ ನಡೆಸುತ್ತಿದ್ದಾಗ ತನಗೆ ನೆರವಾಗಿದ್ದ ವಿಂಡೀಸ್‌ನ ಸ್ಥಳೀಯ ಯುವ ಕ್ರಿಕೆಟಿಗನೊಬ್ಬನಿಗೆ ತನ್ನ ಬ್ಯಾಟ್ ಹಾಗೂ ಒಂದು ಜೊತೆ ಶೂವನ್ನು ಉಡುಗೊರೆಯಾಗಿ ನೀಡಿದರು.

ಬಿಸಿಸಿಐ ಶುಕ್ರವಾರ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಸಿರಾಜ್ ಸ್ಥಳೀಯ ಕ್ರಿಕೆಟಿಗನಿಗೆ ಬ್ಯಾಟ್ ಹಾಗೂ ಶೂಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಹಾಗೂ ಆತನೊಂದಿಗೆ ಫೋಟೊಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

"ಸ್ಥಳೀಯ ಆಟಗಾರರು ಕಳೆದ 2 ದಿನಗಳಿಂದ ನನಗೆ ಸಹಾಯ ಮಾಡಿದ್ದರು. ಹೀಗಾಗಿ ನಾನು ಓರ್ವ ಆಟಗಾರನಿಗೆ ಗಿಫ್ಟ್ ನೀಡಲು ನಿರ್ಧರಿಸಿದೆ''ಎಂದು ಸಿರಾಜ್ ಹೇಳಿದ್ದಾರೆ.

ಸ್ಥಳೀಯ ಆಟಗಾರರು ವಿಕೆಟ್‌ಕೀಪರ್ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಅವರೊಂದಿಗೆ ಸ್ಥಳೀಯ ಆಟಗಾರರು ಫೋಟೊ ಕ್ಲಿಕ್ಕಿಸಿಕೊಂಡರು. ಸ್ಟಾರ್ ಸ್ಪಿನ್ನರ್ ಆರ್.ಅಶ್ವಿನ್ ಯುವ ಆಟಗಾರನಿಗೆ ಸಲಹೆಗಳನ್ನು ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News