ಟಿ20 ಪಂದ್ಯದ ಮೊದಲೆರಡು ಎಸೆತದಲ್ಲಿ ಸಿಕ್ಸರ್ | ಯಶಸ್ವಿ ಜೈಸ್ವಾಲ್ ಮಹತ್ವದ ಸಾಧನೆ

Update: 2024-07-14 21:26 IST
ಟಿ20 ಪಂದ್ಯದ ಮೊದಲೆರಡು ಎಸೆತದಲ್ಲಿ ಸಿಕ್ಸರ್ | ಯಶಸ್ವಿ ಜೈಸ್ವಾಲ್ ಮಹತ್ವದ ಸಾಧನೆ

ಯಶಸ್ವಿ ಜೈಸ್ವಾಲ್ | PC : X \ @Cricketracker

  • whatsapp icon

ಹೊಸದಿಲ್ಲಿ : ಪುರುಷರ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಿರುವ ಯಶಸ್ವಿ ಜೈಸ್ವಾಲ್ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಪಂದ್ಯದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಜೈಸ್ವಾಲ್‌ ಈ ಸಾಧನೆ ಮಾಡಿದ್ದಾರೆ.

ಎಡಗೈ ಬ್ಯಾಟರ್ ಜೈಸ್ವಾಲ್ ಝಿಂಬಾಬ್ವೆ ನಾಯಕ ಸಿಕಂದರ್ ರಝಾ ಅವರ ಪಂದ್ಯದ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸಿದರು. ಇದು ನೋ-ಬಾಲ್ ಆಗಿತ್ತು. ಜೈಸ್ವಾಲ್ ಆ ನಂತರ ಫ್ರಿ-ಹಿಟ್‌ನ ಸಂಪೂರ್ಣ ಲಾಭ ಪಡೆದು ಮತ್ತೊಂದು ಸಿಕ್ಸರ್ ಸಿಡಿಸಿದರು. ಆಗ ಭಾರತವು ಕೇವಲ 1 ಎಸೆತದಲ್ಲಿ 13 ರನ್ ಗಳಿಸಿತ್ತು. ಜೈಸ್ವಾಲ್ ಮೊದಲ ಓವರ್‌ನ 4ನೇ ಎಸೆತದಲ್ಲಿ ರಝಾ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು.

ತಾಂಝಾನಿಯಾದ ಇವಾನ್ ಸೆಲೆಮನಿ 2022ರಲ್ಲಿ ರವಾಂಡದ ಮಾರ್ಟಿನ್ ಅಕಯೆಝು ವಿರುದ್ಧ ಮೊದಲೆರಡು ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಆಗಿದ್ದಾರೆ.

ಇಂಗ್ಲೆಂಡ್ ಓಪನಿಂಗ್ ಬ್ಯಾಟರ್ ಫಿಲ್ ಸಾಲ್ಟ್ ಕಳೆದ ತಿಂಗಳು ಒಮಾನ್ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ರನ್ ಚೇಸಿಂಗ್ ವೇಳೆ ಇನಿಂಗ್ಸ್‌ನ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News