ಪ್ಯಾಟ್ ಕಮಿನ್ಸ್ ರೊಂದಿಗೆ ಸನ್ ರೈಸರ್ಸ್ ಸಹಿ ಹಾಕಿರುವುದು ದಿಟ್ಟ ನಡೆ: ಇರ್ಫಾನ್ ಪಠಾಣ್

Update: 2024-03-16 16:37 GMT

ಇರ್ಫಾನ್ ಪಠಾಣ್ | Photo: NDTV 

ಹೊಸದಿಲ್ಲಿ : ಮುಂಬರುವ 2024ರ ಋತುವಿನ ಐಪಿಎಲ್‌ ಗೆ ಪ್ಯಾಟ್ ಕಮಿನ್ಸ್ ರೋಂದಿಗೆ ಸಹಿ ಹಾಕಿರುವ ಸನ್ರೈಸರ್ಸ್ ಹೈದರಾಬಾದ್‌ ನ ದಿಟ್ಟ ನಡೆಯನ್ನು ಭಾರತದ ಮಾಜಿ ಆಲ್‌ ರೌಂಡರ್ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.

ಕಮಿನ್ಸ್ ಅವರು ಐಪಿಎಲ್‌ ನಲ್ಲಿ ಸನ್ರೈಸರ್ಸ್ ಹೈದರಾಬಾದ್‌ ನ ಮೇಲೆ ಗಣನೀಯ ಪರಿಣಾಮ ಬೀರುವ ಬಗ್ಗೆ ಹಾಗೂ ಆ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ಪಠಾಣ್ ಆಶಾವಾದ ವ್ಯಕ್ತಪಡಿಸಿದರು.

ಹರಾಜಿನಲ್ಲಿ 20.5 ಕೋಟಿ ರೂ. ವ್ಯಯಿಸಿ ಕಮಿನ್ಸ್ ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದ ಸನ್ರೈಸರ್ಸ್ ತಂಡ 2024ರ ಐಪಿಎಲ್ ಋತುವಿನಲ್ಲಿ ಅವರನ್ನು ನಾಯಕರನ್ನಾಗಿ ನೇಮಿಸಿ ಸುದ್ದಿಯಾಗಿತ್ತು.

ಕಮಿನ್ಸ್ ಅವರು ಆಸ್ಟ್ರೇಲಿಯವು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಗೆಲ್ಲಲು, ಇಂಗ್ಲೆಂಡ್ನಲ್ಲಿ ಆ್ಯಶಸ್ ಕಪ್ಪನ್ನು ತನ್ನಲ್ಲೆ ಉಳಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದಲ್ಲದೆ, ತನ್ನ ನಾಯಕತ್ವದಲ್ಲಿ ಆಸ್ಟ್ರೇಲಿಯಕ್ಕೆ ದಾಖಲೆಯ 6ನೇ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ನೆರವಾಗಿದ್ದರು.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಕಮಿನ್ಸ್ ನಾಯಕನಾಗಿ ಟೂರ್ನಿಯಲ್ಲಿ ಪಾದಾರ್ಪಣೆಗೈಯಲಿದ್ದಾರೆ. ಸನ್ ರೈಸರ್ಸ್ ನ ನೂತನ ಕೋಚ್ ಡೇನಿಯಲ್ ವೆಟೋರಿ ಅವರನ್ನು ಸೇರಿಕೊಳ್ಳಲಿದ್ದಾರೆ.

ಕಮಿನ್ಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಐಸಿಸಿ ಏಕದನ ವಿಶ್ವಕಪ್ ಹಾಗೂ ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಭಾರೀ ಯಶಸ್ಸು ಕಂಡಿದ್ದಾರೆ. ಆದರೆ, ಐಪಿಎಲ್‌ ನಲ್ಲಿ ಅವರ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. ಈ ಬಾರಿಯ ಐಪಿಎಲ್‌ ನಲ್ಲಿ ಅವರು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸ ನನಗಿದೆ. ಹಲವು ಸಮಯದಿಂದ ಗೆಲುವನ್ನು ಕಾಣದ ಸನ್ರೈಸರ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ಟಿ20 ಕ್ರಿಕೆಟ್ ಎನ್ನುವುದು 50 ಓವರ್ ಹಾಗೂ ಟೆಸ್ಟ್ ಕ್ರಿಕೆಟ್‌ ಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದೆ ಎಂದು ಪಠಾಣ್ ಅಭಿಪ್ರಾಯಪಟ್ಟರು.

ಹೈದರಾಬಾದ್ ತಂಡ ಕಳೆದ ಎರಡು ಋತುವಿನಲ್ಲಿ ಐಡೆನ್ ಮರ್ಕ್ರಮ್ ನಾಯಕತ್ವದಲ್ಲಿ ಸವಾಲುಗಳನ್ನು ಎದುರಿಸಿತ್ತು. ಐಪಿಎಲ್-2023ರಲ್ಲಿ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News