ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ದೊಡ್ಡ ಅಂತರದ ಗೆಲುವು ಕಂಡ ಆಸೀಸ್

Update: 2023-10-25 18:20 GMT

Photo- PTI

ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ನೆದರ್ಲ್ಯಾಂಡ್ಸ್ ವಿರುದ್ದದ ಪಂದ್ಯದಲ್ಲಿ ಆಸ್ಟ್ರೇಲಿಯ ಏಕದಿನ ವಿಶ್ವಕಪ್ ಇತಿಹಾಸದ 309 ರನ್ ಅಂತರದ ಭಾರೀ ಗೆಲುವು ಸಾಧಿಸುವುದರೊಂದಿಗೆ ದಾಖಲೆ ಬರೆದಿದೆ.

ಬುಧವಾರ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯ ಮತ್ತು ನೆದರ್ಲ್ಯಾಂಡ್ಸ್ ನಡುವಣ ಪಂದ್ಯ ಹೊಸ ದಾಖಲೆಗೆ ಕಾರಣವಾಯಿತು. ಮಾಕ್ಸ್ ವೆಲ್ ಹಾಗೂ ಡೇವಿಡ್ ವಾರ್ನರ್ ಶತಕದ ಮೋಡಿ ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಅರ್ಧಶತಕ ಆಟ ಆಸ್ಟ್ರೇಲಿಯ ತಂಡ ನೆದರ್ಲ್ಯಾಂಡ್ಸ್ ಅನ್ನು 90 ರನ್ ಗೆಆಲೌಟ್ ಮಾಡುವುದರೊಂದಿಗೆ ದೊಡ್ಡ ಅಂತರದ ಗೆಲುವಿನ ದಾಖಲೆ ಬರೆಯಿತು.

ಏಕದಿನ ವಿಶ್ವಕಪ್ ನಲ್ಲಿ ಈವರೆಗೆ ದಾಖಲಾದ ಬೃಹತ್ ಅಂತರದ ಗೆಲುವು

ಆಸ್ಟ್ರೇಲಿಯ VS ನೆದರ್ಲ್ಯಾಂಡ್ಸ್ 309 ರನ್ -2023 (ಹೊಸದಿಲ್ಲಿ)

ಆಸ್ಟ್ರೇಲಿಯ vs ಅಫ್ಘಾನಿಸ್ತಾನ್ 275 ರನ್-2015 (ಪರ್ಥ್)

ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ 257 ರನ್ - 2015(ಸಿಡ್ನಿ)

ಆಸ್ಟ್ರೇಲಿಯ vs ನಮೀಬಿಯಾ 256 ರನ್ -2003 (ಪೊಟ್ಚೆಫ್ಸ್ಟ್ರೂಮ್)

ಶ್ರಿಲಂಕಾ vs ಬರ್ಮುಡಾ 243 ರನ್ -2007 (ಪೊರ್ಟ್ ಸ್ಪೈನ್)

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News