ಏಷ್ಯಾಕಪ್ ನಲ್ಲಿ ಭಾರತ ತಂಡದ ಉಪನಾಯಕನಾಗಿ ಈ ಸೂಪರ್ ಸ್ಟಾರ್!

Update: 2023-08-20 04:10 GMT

Photo: Twitter.com/ juspritbumrah

ಹೊಸದಿಲ್ಲಿ: ಮುಂಬರುವ ಏಷ್ಯಾ ಕಪ್ ಮತ್ತು ಅಕ್ಟೋಬರ್ 5ರಿಂದ ಆರಂಭವಾಗುವ ವಿಶ್ವಕಪ್ ಏಕದಿನ ಪಂದ್ಯಾವಳಿಗಳಿಗೆ ಭಾರತ ತಂಡದ ಉಪನಾಯಕ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಜತೆಗೆ ಜಸ್ಪ್ರೀತ್ ಬುಮ್ರಾ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ಪಾಂಡ್ಯ ಅವರನ್ನು ಭಾರತ ಟಿ20 ತಂಡದ ಖಾಯಂ ನಾಯಕರನ್ನಾಗಿ ನೇಮಿಸಲಾಗಿದ್ದು, ಬುಮ್ರಾ ಐರ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾದ ಟಿ20 ಸರಣಿಗೆ ಮರಳಿದ್ದಾರೆ. ಇವರು ಬರೋಡಾದ ವರ್ಣರಂಜಿತ ಆಲ್ರೌಂಡರ್ ಗೆ ತುರುಸಿನ ಸ್ಪರ್ಧೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಾಯಕತ್ವದ ಜ್ಯೇಷ್ಠತೆಯ ನಿಯಮಾವಳಿಯನ್ನು ನೋಡಿದರೆ 2022ರಲ್ಲಿ ಟೆಸ್ಟ್ ತಂಡಕ್ಕೆ ಹಂಗಾಮಿ ನಾಯಕರಾಗಿದ್ದ ಬುಮ್ರಾ, ಪಾಂಡ್ಯ ಅವರಿಗಿಂತ ಮುಂದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣೀಯ ವೇಳೆ ಪಾಂಡ್ಯ ಅವರಿಗಿಂತ ಮುನ್ನ ಏಕದಿನ ತಂಡದ ಉಪ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು" ಎಂದು ಬಿಸಿಸಿಐ ಮೂಲಗಳು ಹೇಳಿವೆ.

"ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಬುಮ್ರಾ ಅವರನ್ನು ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಆಯ್ಕೆ ಮಾಡಿದರೆ ಅಚ್ಚರಿ ಇಲ್ಲ. ಈ ಕಾರಣದಿಂದಲೇ ಐರ್ಲೆಂಡ್ ವಿರುದ್ಧದ ಸರಣಿಗೆ ಋತುರಾಜ್ ಬದಲು ಅವರಿಗೆ ನಾಯಕತ್ವ ನೀಡಲಾಗಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪಾಂಡ್ಯ ಗುಜರಾತ್ ಟೈಟನ್ಸ್ ತಂಡದ ಐಪಿಎಲ್ ನಾಯಕನಾಗಿ ತಂಡವನ್ನು ಮುನ್ನಡೆಸಿದ 2022ರಲ್ಲಿ ಪ್ರಶಸ್ತಿ ಜಯಿಸಲು ಕಾರಣರಾಗಿದ್ದರು. 2023ರಲ್ಲಿ ಅವರ ತಂಡ ರನ್ನರ್ ಅಪ್ ಆಗಿತ್ತು. ಆದರೆ ಆಶೀಶ್ ನೆಹ್ರಾ ಅವರಂಥ ಪ್ರಮುಖರು ಕೂಡಾ ಟೈಟಾನ್ ಗೆಲುವಿನ ಯಾತ್ರೆಗೆ ಗಣನೀಯ ಕೊಡುಗೆ ನೀಡಿದ್ದರು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News