ಟಿ20 ವಿಶ್ವಕಪ್ ಕ್ರಿಕೆಟ್ | ಭಾರತ-ಐರ್ಲ್ಯಾಂಡ್ ಪಂದ್ಯದ ಟಿಕೆಟ್ ಮಾ.19ರಿಂದ ಮಾರಾಟ
Update: 2024-03-14 18:05 GMT
ಹೊಸದಿಲ್ಲಿ:ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ 2024ರ ಟಿ20 ವಿಶ್ವಕಪ್ ನ ಟಿಕೆಟ್ ಮಾರಾಟದ ಕುರಿತು ಐಸಿಸಿ ಮಹತ್ವದ ಪ್ರಕಟನೆ ನೀಡಿದೆ.
ಜೂನ್ 1ರಿಂದ ಆರಂಭವಾಗಲಿರುವ ವಿಶ್ವಕಪ್ ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ.
ಇತ್ತೀಚೆಗೆ ನೀಡಿರುವ ಪ್ರಕಟನೆಯಲ್ಲಿ ನ್ಯೂಯಾರ್ಕ್ನಲ್ಲಿ ಭಾರತ ಹಾಗೂ ಐರ್ಲ್ಯಾಂಡ್ ನಡುವೆ ನಡೆಯುವ ಪಂದ್ಯ ಸಹಿತ 13 ಹೆಚ್ಚುವರಿ ಪಂದ್ಯಗಳ ಟಿಕೆಟ್ ಗಳು ಮಾರ್ಚ್ 19ರಿಂದ ಲಭ್ಯವಿರಲಿದೆ ಎಂದು ಹೇಳಿತ್ತು.
ಈ ಹಿಂದೆ 37 ಪಂದ್ಯಗಳ ಟಿಕೆಟ್ ಮಾರಾಟವು ಫೆಬ್ರವರಿ 1ರಿಂದ ಪಬ್ಲಿಕ್ ಬ್ಯಾಲಟ್ ಮೂಲಕ ಆರಂಭವಾಗಿತ್ತು.
ಭಾರತ-ಐರ್ಲ್ಯಾಂಡ್ ಪಂದ್ಯವು ಜೂನ್ 5ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿದೆ. ಇದು ಟೂರ್ನಿಯಲ್ಲಿ ಭಾರತ ಆಡಲಿರುವ ಮೊದಲ ಪಂದ್ಯವಾಗಿದೆ.