ಇಂದು ದ್ವಿತೀಯ ಏಕದಿನ: ಭಾರತಕ್ಕೆ ಸರಣಿ ಗೆಲ್ಲುವ ತವಕ

Update: 2023-07-28 18:06 GMT

Photo : ಭಾರತೀಯ ಕ್ರಿಕೆಟ್ ತಂಡ | PTI

ಬಾರ್ಬಡೋಸ್ : ವೆಸ್ಟ್ ಇಂಡೀಸ್ ವಿರುದ್ಧ ಶನಿವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ತನ್ನ ಸ್ಥಾಪಿತ ಬ್ಯಾಟಿಂಗ್ ಸರದಿಗೆ ವಾಪಸಾಗುವ ನಿರೀಕ್ಷೆಯಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಬ್ಯಾಟಿಂಗ್ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಗುರಿಯೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.

ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ಗೆ ಸವಾಲಾಗಿರುವ ಪಿಚ್ನಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಇನಿಂಗ್ಸ್ ಆರಂಭದಲ್ಲೇ ಕಣಕ್ಕಿಳಿಸಿ ಪ್ರಯೋಗ ನಡೆಸಿದರು. ಗೆಲ್ಲಲು 115 ರನ್ ಗುರಿ ಪಡೆದ ಭಾರತ 5 ವಿಕೆಟ್ ಕಳೆದುಕೊಂಡರೂ ಸುಲಭ ಜಯ ದಾಖಲಿಸಿತ್ತು.

ಭಾರತವು ಅಕ್ಟೋಬರ್ 8ರಂದು ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ನ ಮೊದಲ ಪಂದ್ಯವನ್ನಾಡುವ ಮೊದಲು 11 ಏಕದಿನ ಪಂದ್ಯಗಳನ್ನು ಆಡಲಿದೆ. ಸ್ಥಿರ ಪ್ರದರ್ಶನ ನೀಡುವ ಆಟಗಾರರಿಗೆ ಆದ್ಯತೆ ನೀಡಲು ಬಯಸಿದೆ. ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜ ಹಾಗೂ ಕುಲದೀಪ್ ಯಾದವ್ ಕೆರಿಬಿಯನ್ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದ ನಂತರ ವೆಸ್ಟ್ಇಂಡೀಸ್ ಕ್ರಿಕೆಟ್ ಜನಪ್ರಿಯತೆ ಕುಗ್ಗುತ್ತಲಿದೆ. ಭಾರತದ ಸ್ಪಿನ್ನರ್ಗಳ ವಿರುದ್ಧ ವಿಂಡೀಸ್ ಬ್ಯಾಟರ್ಗಳು ಟಿ-20 ಶೈಲಿಯಲ್ಲಿ ಆಡಲು ಹೋಗಿ ವಿಕೆಟ್ ಕೈಚೆಲ್ಲಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News