ಯುಎಸ್ ಓಪನ್: ಫ್ರಾನ್ಸಿಸ್ ಟಿಯಾಫೋ ಕ್ವಾರ್ಟರ್‌ಫೈನಲ್‌ಗೆ
ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ, ಅಮೆರಿಕದ ಫ್ರಾನ್ಸಿಸ್ ಟಿಯಾಫೋ ರವಿವಾರ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಅವರು ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ ಅಲೆಕ್ಸೀ ಪೋಪಿರಿನ್‌ರನ್ನು 6-4, 7-6 (7/3), 2-6, 6-3 ಸೆಟ್‌ಗಳಿಂದ ಸೋಲಿಸಿದರು.
ಇದು ಅವರ ಮೂರನೇ ಯುಎಸ್ ಓಪನ್ ಕ್ವಾರ್ಟರ್‌ಫೈನಲ್ ಆಗಿದೆ. ಇದರೊಂದಿಗೆ ಈ ಪಂದ್ಯಾವಳಿಯಲ್ಲಿ, 2000ದ ಬಳಿಕ ಮೂರು ಬಾರಿ ಕ್ವಾರ್ಟರ್‌ಪೈನಲ್ ತಲುಪಿದ ನಾಲ್ಕನೇ ಅಮೆರಿಕ ಆಟಗಾರನಾಗಿದ್ದಾರೆ. ಈವರೆಗೆ ಈ ಸಾಧನೆ ಮಾಡಿದವರೆಂದರೆ- ಆ್ಯಂಡ್ರಿ ಅಗಾಸಿ, ಆ್ಯಂಡಿ ರಾಡಿಕ್ ಮತ್ತು ಪೀಟ್ ಸಾಂಪ್ರಸ್.
ಇದಕ್ಕೂ ಹಿಂದಿನ ಸುತ್ತಿನಲ್ಲಿ ಪೋಪಿರಿನ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು.
ಕ್ವಾರ್ಟರ್‌ಫೈನಲ್‌ನಲ್ಲಿ ಟಿಯಾಫೊ ಬಲ್ಗೇರಿಯದ ಅನುಭವಿ ಆಟಗಾರ ಗ್ರಿಗರ್ ಡಿಮಿಟ್ರೊವ್‌ರನ್ನು ಎದುರಿಸಲಿದ್ದಾರೆ.
ರವಿವಾರ ನಡೆದ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ, ಅಮೆರಿಕದವರೇ ಆದ ಟೇಲರ್ ಫ್ರಿಟ್ಝ್ ನಾರ್ವೆಯ ಕ್ಯಾಸ್ಪರ್ ರೂಡ್‌ರನ್ನು 4-6, 6-4, 6-3, 6-2 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.