ವಿನೇಶ್ ಫೋಗಟ್ ಆಗಸ್ಟ್ 17ರಂದು ಭಾರತಕ್ಕೆ ಮರಳಲಿದ್ದಾರೆ : ಬಜರಂಗ್ ಪುನಿಯಾ

Update: 2024-08-14 15:19 GMT

ವಿನೇಶ್ ಫೋಗಟ್ | PC : olympics.com

ಹೊಸದಿಲ್ಲಿ : ವಿನೇಶ್ ಫೋಗಟ್ ಪ್ಯಾರಿಸ್ನಿಂದ ವಾಪಸಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ಹೊಸದಿಲ್ಲಿಗೆ ಬಂದಿಳಿಯಲಿದ್ದಾರೆ ಎಂದು ಸಹ ಕುಸ್ತಿಪಟು ಬಜರಂಗ್ ಪುನಿಯಾ ಬುಧವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ವಿನೇಶ್ ಅವರು ಸೋಮವಾರ ಒಲಿಂಪಿಕ್ಸ್ ಕ್ರೀಡಾಗ್ರಾಮವನ್ನು ತೊರೆದಿದ್ದರು. ಅವರು ಮಂಗಳವಾರ ಬೆಳಗ್ಗೆ 10:30ಕ್ಕೆ ಹೊಸದಿಲ್ಲಿಗೆ ತಲುಪಲಿದ್ದಾರೆ ವರದಿಯಾಗಿತ್ತು. ಆದರೆ ಅನರ್ಹತೆಯ ವಿರುದ್ಧ ತಾನು ಸಲ್ಲಿಸಿರುವ ಮೇಲ್ಮನವಿಯ ತೀರ್ಪು ಬಾಕಿ ಇದ್ದರೂ ಅವರು ಸ್ವದೇಶಕ್ಕೆ ಮರಳಿಲ್ಲ.

ಕ್ರೀಡಾ ನ್ಯಾಯ ಮಂಡಳಿ(ಸಿಎಎಸ್) ಮಂಗಳವಾರ ವಿನೇಶ್ ಕುರಿತ ತೀರ್ಪನ್ನು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ ವಿಚಾರಣೆ ನಡೆಸಿದ್ದ ಸಿಎಸ್ಎಸ್ನ ತಾತ್ಕಾಲಿಕ ಸಮಿತಿಯು ತೀರ್ಪನ್ನು ಆಗಸ್ಟ್ 16ರ ತನಕ ಮುಂದೂಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಬಜರಂಗ್ ಪುನಿಯಾ, ಆಗಸ್ಟ್ 17ರಂದು ಶನಿವಾರ ವಿನೇಶ್ ಹೊಸದಿಲ್ಲಿಯಲ್ಲಿ ಸಾಗಲಿರುವ ಮಾರ್ಗದ ವಿವರವನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News