ಸಂಜಯ್ ಸಿಂಗ್ ಇಲ್ಲದ ಕುಸ್ತಿ ಒಕ್ಕೂಟವನ್ನು ನಾವು ಒಪ್ಪಿಕೊಳ್ಳುತ್ತೇವೆ: ಸಾಕ್ಷಿ ಮಲಿಕ್

Update: 2024-01-03 16:47 GMT

 ಸಾಕ್ಷಿ ಮಲಿಕ್ | Photo: PTI 

ಹೊಸದಿಲ್ಲಿ : ಬ್ರಿಜ್ ಭೂಷಣ್ ಸಿಂಗ್ ನಿಷ್ಠಾವಂತ ಸಂಜಯ್ ಸಿಂಗ್ರನ್ನು ಕುಸ್ತಿ ಒಕ್ಕೂಟದಿಂದ ದೂರ ಇಟ್ಟರೆ ಹೊಸದಾಗಿ ಆಯ್ಕೆಯಾದ ಭಾರತದ ಕುಸ್ತಿ ಫೆಡರೇಶನ್ ನೊಂದಿಗೆ ನಮಗೆ ಯಾವುದೇ ಸಮಸ್ಯೆ ಇರದು ಎಂದು ಕುಸ್ತಿ ತಾರೆ ಸಾಕ್ಷಿ ಮಲಿಕ್ ಹೇಳಿದರು.

ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾಗಿದ್ದನ್ನು ವಿರೋಧಿಸಿ ಸಾಕ್ಷಿ ಮಲಿಕ್ ಡಿ.21ರಂದು ಕ್ರೀಡೆಗೆ ನಿವೃತ್ತಿ ಘೋಷಿಸಿದ್ದರು.

ಸಂಜಯ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಹೊಸ ಡಬ್ಲ್ಯುಎಫ್ಐನೊಂದಿಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಸಂಜಯ್ ಸಿಂಗ್ ಇಲ್ಲದೇ ಇರುವ ಕುಸ್ತಿ ಒಕ್ಕೂಟ ಆಡಳಿತಕ್ಕೆ ಬಂದರೆ ನಾವು ಅದನ್ನು ಸ್ವಾಗತಿಸುತ್ತೇವೆ. ಸರಕಾರ ನೇಮಿಸಿರುವ ತಾತ್ಕಾಲಿಕ ಸಮಿತಿಯೊಂದಿಗೂ ನಮ್ಮ ಯಾವುದೇ ತಕರಾರಿಲ್ಲ ಎಂದು 31ರ ಹರೆಯದ ಮಲಿಕ್ ಹೇಳಿದರು.

*ನನ್ನ ತಾಯಿಗೆ ಬೆದರಿಕೆ ಕರೆ ಬರುತ್ತಿದೆ

ಕಳೆದ ಎರಡು-ಮೂರು ದಿನಗಳಿಂದ ಬ್ರಿಜ್ ಭೂಷಣ್ ಸಿಂಗ್ ಬೆಂಬಲಿಗರು ಸಕ್ರಿಯರಾಗಿದ್ದಾರೆ. ನನ್ನ ತಾಯಿಗೆ ಫೋನ್ ಕರೆಗಳ ಮೂಲಕ ಬೆದರಿಕೆಗಳು ಬರುತ್ತಿವೆ. ನಿಮ್ಮ ಕುಟುಂಬದ ಯಾರಾದರೊಬ್ಬರ ಮೇಲೆ ಪ್ರಕರಣ ದಾಖಲಿಸುವುದಾಗಿ ಸಿಂಗ್ ಬೆಂಬಲಿಗರು ಬೆದರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ. ನಿಂದಿಸುವವರು ತಮ್ಮ ಮನೆಯಲ್ಲೂ ಸಹೋದರಿಯರು ಹಾಗೂ ಹೆಣ್ಣು ಮಕ್ಕಳಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಸಾಕ್ಷಿ ಮಲಿಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News