ಏಶ್ಯಕಪ್ ಫೈನಲ್ ನಲ್ಲಿ ಸಿರಾಜ್ ಕೇವಲ 7 ಓವರ್ ಬೌಲಿಂಗ್ ಮಾಡಿದ್ದೇಕೆ ಎಂಬ ಪ್ರಶ್ನೆಗೆ ರೋಹಿತ್ ಉತ್ತರಿಸಿದ್ದು ಹೀಗೆ…

Update: 2023-09-18 07:18 GMT

Photo: Twitter

ಹೊಸದಿಲ್ಲಿ: ಶ್ರೀಲಂಕಾವನ್ನು ರವಿವಾರ ಕೇವಲ 50 ರನ್ ಗಳಿಗೆ ಆಲೌಟ್ ಮಾಡಿದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ತಮ್ಮ ವೇಗದ ಬೌಲರ್ಗಳ ಪ್ರದರ್ಶನದ ಬಗ್ಗೆ ತನಗಾಗಿರುವ ಸಂತೋಷವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಬೌಲರ್ ಗಳು ತಂಡಕ್ಕೆ ಈ ರೀತಿಯ ಕೊಡುಗೆ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ವೇಗಿ ಮುಹಮ್ಮದ್ ಸಿರಾಜ್ ಅದ್ಭುತ (21ಕ್ಕೆ 6) ಬೌಲಿಂಗ್ ಮೂಲಕ ಏಶ್ಯ ಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್ ಗಳ ಭರ್ಜರಿ ಜಯಕ್ಕೆ ಭದ್ರ ಅಡಿಪಾಯ ಹಾಕಿದರು.

"ವೇಗದ ಬೌಲರ್ ಗಳ ಈ ರೀತಿಯ ಪ್ರದರ್ಶನವನ್ನು ನೋಡಿದಾಗ ನನಗೆ ತುಂಬಾ ತೃಪ್ತಿ ಸಿಗುತ್ತದೆ. ಎಲ್ಲಾ ನಾಯಕರೂ ವೇಗದ ಬೌಲಿಂಗ್ನಲ್ಲಿ ತುಂಬಾ ಹೆಮ್ಮೆಪಡುತ್ತಾರೆ ಹಾಗೂ ನಾನು ಅದಕ್ಕೆ ಭಿನ್ನವಾಗಿಲ್ಲ. ನಾವು ಅದ್ಭುತ ವೇಗದ ಬೌಲರ್ಗಳನ್ನು ಹೊಂದಿದ್ದೇವೆ " ಎಂದು ರೋಹಿತ್ ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

"ಅವರೆಲ್ಲರೂ ವಿಭಿನ್ನ ಕೌಶಲ್ಯ ಮತ್ತು ವ್ಯತ್ಯಾಸಗಳನ್ನು ಹೊಂದಿದ್ದಾರೆ - ಒಬ್ಬರು ವೇಗವಾಗಿ ಬೌಲ್ ಮಾಡಬಹುದು, ಒಬ್ಬರು ಚೆಂಡನ್ನು ಸ್ವಿಂಗ್ ಮಾಡಬಹುದು, ಒಬ್ಬರು ಉತ್ತಮ ಬೌನ್ಸ್ ಪಡೆಯಬಹುದು. ನೀವು ಈ ಎಲ್ಲಾ ಅಂಶಗಳನ್ನು ಒಂದೇ ತಂಡದಲ್ಲಿ ಪಡೆದಾಗ ಅದು ಉತ್ತಮ ಅಂಶವಾಗುತ್ತದೆಎಂದು ರೋಹಿತ್ ಹೇಳಿದ್ದಾರೆ.

ನಿರಂತರ ಏಳು ಓವರ್ ಗಳ ಸ್ಪೆಲ್ ನಲ್ಲಿ ಆರು ವಿಕೆಟ್ಗಳನ್ನು ಗಳಿಸಿದ ನಂತರ ಸಿರಾಜ್ ದಣಿದಿದ್ದರು. ವೇಗಿ ಮತ್ತೆ ಬೌಲಿಂಗ್ ಮಾಡದಂತೆ ತಡೆಯಲು ತಂಡದ ತರಬೇತುದಾರರಿಂದ ನನಗೆ ಸಂದೇಶವೊಂದು ಬಂತು ಎಂದು ರೋಹಿತ್ ಹೇಳಿದರು.

"ಸ್ಲಿಪ್ ಗಳಿಂದ ಸಿರಾಜ್ ಹೇಗೆ ಬೌಲಿಂಗ್ ಮಾಡಿದರು ಎಂದು ವೀಕ್ಷಿಸಲು ತುಂಬಾ ಸಂತೋಷವಾಯಿತು. ಅವರು ಚೆಂಡನ್ನು ಇತರ ಇಬ್ಬರಿಗಿಂತ ಸ್ವಲ್ಪ ಹೆಚ್ಚು ಚಲಿಸುವಂತೆ ಮಾಡಿದರು. ಅವರು ಆ ಸ್ಪೆಲ್ ನಲ್ಲಿ ಏಳು ಓವರ್ ಗಳನ್ನು ಬೌಲ್ ಮಾಡಿದರು ನಾವು ಈಗ ಅವರನ್ನುಬೌಲಿಂಗ್ ಮಾಡದಂತೆ ನಿಲ್ಲಿಸಬೇಕು ಎಂದು ತರಬೇತುದಾರರಿಂದ ನನಗೆ ಸಂದೇಶ ಬಂತು. ಅವರು ಬೌಲಿಂಗ್ ಮಾಡಿ ಸಾಕಷ್ಟು ದಣಿದಿದ್ದರು. ಸಿರಾಜ್ ಗೆ ಮತ್ತೊಂದು ಓವರ್ ಕೊಡುವ ಯೋಚನೆ ನನಗಿರಲಿಲ್ಲ" ಎಂದು ರೋಹಿತ್ ಹೇಳಿದರು.

‘’ಸಿರಾಜ್ ಏಳು ಓವರ್ ಗಳನ್ನು ಬೌಲ್ ಮಾಡಿದ್ದರು. . ಸಿರಾಜ್ ತಿರುವನಂತಪುರದಲ್ಲಿ ಶ್ರೀಲಂಕಾ ವಿರುದ್ಧ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದರು. ಆಗ ಅವರು ಸತತವಾಗಿ 8-9 ಓವರ್ಗಳನ್ನು ಬೌಲ್ ಮಾಡಿದ್ದರು" ಎಂದು ರೋಹಿತ್ ಹೇಳಿದರು.

."ಕುಲ್ ದೀಪ್ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಶ್ರೀಲಂಕಾ ವಿರುದ್ಧ (ಸೂಪರ್ 4 ಪಂದ್ಯ) ಉತ್ತಮವಾಗಿ ಬೌಲಿಂಗ್ ಮಾಡಿದರು. ನಾವು ಆಗ ಸಣ್ಣ ಮೊತ್ತವನ್ನು ದಾಖಲಿಸಿದ್ದರೂ ಗೆದ್ದಿದ್ದೇವೆ ಕಳೆದ ಎರಡು ವರ್ಷಗಳಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತಿದೆ. ಅವರು ಯಾವುದೇ ಪರಿಸ್ಥಿತಿಯಿಂದ ತಂಡವನ್ನು ಗೆಲುವಿನತ್ತ ಸೆಳೆಯುತ್ತಾರೆ ಎಂದು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಕುಲದೀಪ್ ರನ್ನು ರೋಹಿತ್ ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News