ವಿಂಬಲ್ಡನ್: ಗ್ರಾನ್‌ಸ್ಲಾಮ್‌ನಲ್ಲಿ 35ನೇ ಬಾರಿ ಫೈನಲ್‌ಗೆ ತಲುಪಿ ಇತಿಹಾಸ ಬರೆದ ಜೊಕೊವಿಕ್

Update: 2023-07-14 15:57 GMT

ಫೋಟೋ: Twitter@ Wimbledon

Wimbledon

ಲಂಡನ್, ಜು.14: ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಫೈನಲ್ ತಲುಪಿದ್ದಾರೆ. ಗ್ರಾನ್‌ಸ್ಲಾಮ್‌ನಲ್ಲಿ 35ನೇ ಬಾರಿ ಫೈನಲ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡಿರುವ ಜೊಕೊವಿಕ್ ಇತಿಹಾಸ ನಿರ್ಮಿಸಿದರು.

ಈ ಗೆಲುವಿನ ಮೂಲಕ ಸತತ 5ನೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ರೋಜರ್ ಫೆಡರರ್ ದಾಖಲೆ ಸರಿಗಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಸೆಮಿ ಫೈನಲ್‌ನಲ್ಲಿ ಜೊಕೊವಿಕ್ ಇಟಲಿಯ ಜೆನ್ನಿಕ್ ಸಿನ್ನೆರ್‌ರನ್ನು 6-3, 6-4, 7-6(4) ನೇರ ಸೆಟ್‌ಗಳ ಅಂತರದಿಂದ ಸೋಲಿಸಿ 9ನೇ ಬಾರಿ ವಿಂಬಲ್ಡನ್‌ನಲ್ಲಿ ಫೈನಲ್ ತಲುಪಿದರು.

ಸರ್ಬಿಯದ ಸೂಪರ್ ಸ್ಟಾರ್ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ನಂ.1 ಸ್ಥಾನ ವಶಪಡಿಸಿಕೊಳ್ಳುವುದಕ್ಕೆ ಇನ್ನೊಂದು ಹೆಜ್ಜೆ ಇಡಬೇಕಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News