ಪ್ರಸಕ್ತ ಐಪಿಎಲ್‌ನಲ್ಲಿ ಶತಕ ಗಳಿಸಿದ 7ನೇ ಬ್ಯಾಟರ್ ಯಶಸ್ವಿ ಜೈಸ್ವಾಲ್
ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 59 ಎಸೆತಗಳಲ್ಲಿ ಶತಕ ಗಳಿಸಿರುವ ಯಶಸ್ವಿ ಜೈಸ್ವಾಲ್ ಕೊನೆಗೂ ಪ್ರಸಕ್ತ ಐಪಿಎಲ್‌ನಲ್ಲಿ ಮೊದಲಿನ ಲಯ ಕಂಡುಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೈಸ್ವಾಲ್ ಈ ಪಂದ್ಯಕ್ಕಿಂತ ಮೊದಲು ರನ್ ಬರ ಎದುರಿಸಿದ್ದರು. 7 ಇನಿಂಗ್ಸ್‌ಗಳಲ್ಲಿ ಕೇವಲ 121 ರನ್ ಗಳಿಸಿದ್ದರು. 39 ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು.
60 ಎಸೆತಗಳಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಹಿತ ಔಟಾಗದೆ 104 ರನ್ ಗಳಿಸಿದ್ದ ಜೈಸ್ವಾಲ್ ರಾಜಸ್ಥಾನ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸುವಲ್ಲಿ ನೆರವಾದರು.
ಜೈಸ್ವಾಲ್ ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಶತಕ ದಾಖಲಿಸಿದ 7ನೇ ಬ್ಯಾಟರ್ ಎನಿಸಿಕೊಂಡರು.
*ಐಪಿಎಲ್-2024ರಲ್ಲಿ ಶತಕ ಗಳಿಸಿದ ಆಟಗಾರರು:
1)ವಿರಾಟ್ ಕೊಹ್ಲಿ-ಔಟಾಗದೆ 113, ರಾಜಸ್ಥಾನ ವಿರುದ್ಧ ಆರ್‌ಸಿಬಿ ಪರ
2)ಸುನೀಲ್ ನರೇನ್-109, ರಾಜಸ್ಥಾನ ವಿರುದ್ಧ ಕೆಕೆಆರ್ ಪರ
3)ಜೋಸ್ ಬಟ್ಲರ್-ಔಟಾಗದೆ 107, ಕೆಕೆಆರ್ ವಿರುದ್ಧ ರಾಜಸ್ಥಾನ ಪರ
4)ರೋಹಿತ್ ಶರ್ಮಾ-ಔಟಾಗದೆ 105, ಸಿಎಸ್‌ಕೆ ವಿರುದ್ಧ ಮುಂಬೈ ಪರ
5)ಟ್ರಾವಿಸ್ ಹೆಡ್-102-ಆರ್‌ಸಿಬಿ ವಿರುದ್ಧ ಹೈದರಾಬಾದ್
6) ಜೋಸ್ ಬಟ್ಲರ್-ಔಟಾಗದೆ 100-ಆರ್‌ಸಿಬಿ ವಿರುದ್ಧ ರಾಜಸ್ಥಾನ ಪರ
7)ಯಶಸ್ವಿ ಜೈಸ್ವಾಲ್-ಔಟಾಗದೆ 100-ಮುಂಬೈ ವಿರುದ್ಧ ರಾಜಸ್ಥಾನ ಪರ