2025ನೇ ಸಾಲಿನ ಎಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ | ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

Update: 2024-12-02 14:48 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಚ್ 1ರಿಂದ 19ರ ವರೆಗೆ ದ್ವಿತೀಯ ಪಿಯು ಪರೀಕ್ಷೆ-1 ನಡೆಯಲಿದೆ. ಮಾರ್ಚ್ 20 ರಿಂದ ಎಪ್ರಿಲ್ 2ರ ವರೆಗೆ ಎಸೆಸ್ಸೆಲ್ಸಿ ಪರೀಕ್ಷೆ-1 ನಡೆಸಲು ನಿರ್ಧರಿಸಲಾಗಿದೆ. ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿ.16ರ ವರೆಗೆ ಅವಕಾಶವಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿವೆ ಎಂದು ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ:

ಮಾರ್ಚ್- 01 ಶನಿವಾರ : ಕನ್ನಡ, ಅರೇಬಿಕ್.

ಮಾರ್ಚ್- 03 ಸೋಮವಾರ : ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ.

ಮಾರ್ಚ್- 04 ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

ಮಾರ್ಚ್- 05 ಬುಧವಾರ: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.

ಮಾರ್ಚ್- 07 ಶುಕ್ರವಾರ: ಇತಿಹಾಸ, ಭೌತಶಾಸ್ತ್ರ.

ಮಾರ್ಚ್- 08 ಶನಿವಾರ: ಹಿಂದಿ

ಮಾರ್ಚ್- 10 ಸೋಮವಾರ: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ.

ಮಾರ್ಚ್- 12 ಬುಧವಾರ: ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.

ಮಾರ್ಚ್- 13 ಗುರುವಾರ: ಅರ್ಥಶಾಸ್ತ್ರ.

ಮಾರ್ಚ್- 15 ಶನಿವಾರ: ಇಂಗ್ಲೀಷ್‌

ಮಾರ್ಚ್ 17 ಸೋಮವಾರ: ಭೂಗೋಳಶಾಸ್ತ್ರ, ಜೀವಶಾಸ್ತ್ರ.

ಮಾರ್ಚ್- 18 ಮಂಗಳವಾರ: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ.

ಮಾರ್ಚ್ 19 ಬುಧವಾರ: ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ರೀಟೈಲ್, ಬ್ಯೂಟಿ ಅಂಡ್ ವೆಲ್‍ನೆಸ್.

ಎಸ್ಸೆಸೆಲ್ಸಿ ತಾತ್ಕಾಲಿಕ ವೇಳಾಪಟ್ಟಿ:

ಮಾರ್ಚ್- 20 ಗುರುವಾರ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್(ಎನ್‍ಸಿಇಆರ್‍ಟಿ), ಸಂಸ್ಕೃತ.

ಮಾರ್ಚ್- 22 ಶನಿವಾರ: ಸಮಾಜ ವಿಜ್ಞಾನ.

ಮಾರ್ಚ್- 24 ಸೋಮವಾರ: ಇಂಗ್ಲೀಷ್‌, ಕನ್ನಡ.

ಮಾರ್ಚ್- 27 ಗುರುವಾರ: ಗಣಿತ, ಸಮಾಜ ಶಾಸ್ತ್ರ.

ಮಾರ್ಚ್- 29 ಶನಿವಾರ: ಹಿಂದಿ(ಎನ್‍ಸಿಇಆರ್‍ಟಿ), ಪರ್ಷಿಯನ್, ಕನ್ನಡ, ಇಂಗ್ಲೀಷ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್‍ಎಸ್‍ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‍ನೆಸ್, ಅಪರೆಲ್ ಮೇಡ್ ಅಪ್ಸ್ ಅಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್‍ವೇರ್.

ಎಪ್ರಿಲ್- 01 ಮಂಗಳವಾರ: ಅರ್ಥಶಾಸ್ತ್ರ, ಜೆಟಿಎಸ್ ವಿಷಯಗಳು

ಎಪ್ರಿಲ್- 02 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News