ಬಿಬಿಎಂಪಿ ವ್ಯಾಪ್ತಿಯಲ್ಲಿ 474 ಕೋಟಿ ರೂ. ಆಸ್ತಿ ತೆರಿಗೆ ಬಾಕಿ

Update: 2024-09-02 15:35 GMT

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 474 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದ್ದು, 2,64,228 ಆಸ್ತಿ ತೆರಿಗೆದಾರರು ತೆರಿಗೆಯನ್ನು ಪವತಿ ಮಾಡಬೇಕಾಗಿದೆ ಎಂದು ಬಿಬಿಎಂಪಿ ಸೋಮವಾರದಂದು ಅಂಕಿ-ಅಂಶಗಳನ್ನು ಪ್ರಕಟ ಮಾಡಿದೆ.

ಆರ್ಥಿಕ ವರ್ಷದ ಆರಂಭದಲ್ಲಿ ಅಂದರೆ 2024ರ ಎ.1ಕ್ಕೆ ಸರಿಸುಮಾರು 3,95,253 ಆಸ್ತಿ ತೆರಿಗೆದಾರರು 738 ಕೋಟಿ ರೂ.ಗಳ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಇದರಲ್ಲಿ ಇದುವರೆಗೂ 1,31,034 ಆಸ್ತಿ ತೆರಿಗೆದಾರರು 273 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದಾರೆ. ಹಿಂದಿನ ಒಂದು ವಾರದಲ್ಲಿ 26,862 ಆಸ್ತಿ ತೆರಿಗೆದಾರರು 26.94 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದಾರೆ.

ದಾಸರಹಳ್ಳಿ ವಲಯದಲ್ಲಿ 16.92 ಕೋಟಿ ರೂ., ಪಶ್ಚಿಮ ವಲಯದಲ್ಲಿ 49.33 ಕೋಟಿ ರೂ., ಆರ್‌ಆರ್ ನಗರದಲ್ಲಿ 38.52 ಕೋಟಿ ರೂ., ದಕ್ಷಿಣ ವಲಯದಲ್ಲಿ 74.72 ಕೋಟಿ ರೂ., ಬೊಮ್ಮನಹಳ್ಳಿ ವಲಯದಲ್ಲಿ 62.94 ಕೋಟಿ ರೂ., ಮಹದೇವಪುರ ವಲಯದಲ್ಲಿ 116.03ಕೋಟಿ ರೂ., ಯಲಹಂಕ ವಲಯದಲ್ಲಿ 38.43 ಕೋಟಿ ರೂ. ಹಾಗೂ ಪೂರ್ವ ವಲಯದಲ್ಲಿ 69.89 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಬಾಕಿ ಇದೆ.

ಈ ವರ್ಷದಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಮಾಡದ 4600 ನಾನ್-ರೆಸಿಡೆಂಟ್‍ಗಳಿಗೆ ಬೀಗ ಹಾಕಲಾಗಿದೆ. ಈ ಪೈಕಿ ದಾಸರಹಳ್ಳಿ ವಲಯದಲ್ಲಿ 116, ಪಶ್ಚಿಮ ವಲಯದಲ್ಲಿ 1,034, ಆರ್‌ಆರ್ ನಗರದಲ್ಲಿ 400, ದಕ್ಷಿಣ ವಲಯದಲ್ಲಿ 470, ಬೊಮ್ಮನಹಳ್ಳಿ ವಲಯದಲ್ಲಿ 303, ಮಹದೇವಪುರ ವಲಯದಲ್ಲಿ 480, ಯಲಹಂಕ ವಲಯದಲ್ಲಿ 416 ಹಾಗೂ ಪೂರ್ವ ವಲಯದಲ್ಲಿ 1,317 ಆಸ್ತಿಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News