ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಗ್ರಾಪಂ ಸದಸ್ಯೆಯಾಗಿದ್ದ ಮಹಿಳೆಗೆ 7 ವರ್ಷ ಜೈಲು ಶಿಕ್ಷೆ
Update: 2023-10-13 13:37 GMT
ಹಾವೇರಿ, ಅ.13: ಸುಳ್ಳು ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದ ಮಹಿಳೆ ಹಾಗೂ ಅದಕ್ಕೆ ಸಹಕರಿಸಿದ್ದ ವ್ಯಕ್ತಿಗೆ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಗುತ್ತಲ ಗ್ರಾಮದ ಆರೋಪಿ ಮುಕ್ತಾಬಾಯಿ ರಂಗಪ್ಪ ಬೀಸೆ ಎಂಬ ಮಹಿಳೆ ಹಾಗೂ ಆಕೆಗೆ ಸಹಾಯ ಮಾಡಿದ ಭರಡಿ ಗ್ರಾಮದ ಮಾರುತಿ ಹನುಮಂತಪ್ಪ ಕಿಳ್ಳಿಕ್ಯಾತರಗೆ 7 ವರ್ಷಗಳ ಶಿಕ್ಷೆ ಹಾಗೂ 37 ಸಾವಿರ ದಂಡ ವಿಧಿಸಲಾಗಿದೆ.
ಆರೋಪಿ ಮುಕ್ತಾಬಾಯಿ ರಂಗಪ್ಪ ಬೀಸ ಹಿಂದೂ ಗೊಂದಳಿ(ಪ್ರ ವರ್ಗ-1)ಕ್ಕೆ ಸೇರಿದ್ದು, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿ ಸೃಷ್ಟಿಸಿ ಹಾವೇರಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದರು. 2010ರಲ್ಲಿ ಗುತ್ತಲ ಪಂಚಾಯತಿ ವಾರ್ಡ್ ನಂಬರ್ 10ರಿಂದ ಪರಿಶಿಷ್ಟ ಜಾತಿಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.