ʼಬ್ರಾಹ್ಮಿನ್ ಜೀನ್ಸ್ʼ ಎಂದು ಪೋಸ್ಟ್ ಮಾಡಿದ ಬೆಂಗಳೂರು ಮೂಲದ ಸಿಇಒಗೆ ಜನರಿಂದ ಕ್ಲಾಸ್!

Update: 2024-08-25 17:53 IST
ʼಬ್ರಾಹ್ಮಿನ್ ಜೀನ್ಸ್ʼ ಎಂದು ಪೋಸ್ಟ್ ಮಾಡಿದ ಬೆಂಗಳೂರು ಮೂಲದ ಸಿಇಒಗೆ ಜನರಿಂದ ಕ್ಲಾಸ್!

Photo : ndtv

  • whatsapp icon

ಬೆಂಗಳೂರು: ಬೆಂಗಳೂರು ಮೂಲದ ಸಿಇಒ ಒಬ್ಬರು "ಬ್ರಾಹ್ಮಿನ್ ಜೀನ್ಸ್" ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ, ಟೀಕೆಗೆ ಗುರಿಯಾಗಿದ್ದಾರೆ.

ʼಜಸ್ಟ್‌ಬರ್ಸ್ಟ್‌ಔಟ್ʼ ಹೆಸರಿನ ಕಂಟೆಂಟ್ ರೈಟಿಂಗ್ ಏಜೆನ್ಸಿಯ ಸಿಇಒ ಅನುರಾಧಾ ತಿವಾರಿ ಅವರು ಎಕ್ಸ್‌ನಲ್ಲಿ ಚಿತ್ರವನ್ನು ಹಂಚಿಕೊಂಡ ಬಳಿಕ ಟೀಕೆಗೆ ಗುರಿಯಾಗಿದವರು. ಎಳನೀರು ಕುಡಿಯುತ್ತಿರುವ ಚಿತ್ರ ಹಂಚಿಕೊಂಡು ಅವರು ಬ್ರಾಹ್ಮಿನ್ ಜೀನ್ಸ್ ಎಂದು ಬರೆದಿದ್ದರು.

ಪೋಸ್ಟ್ ಹಂಚಿಕೊಂಡ ತಕ್ಷಣ ಅದು ವೈರಲ್ ಆಯಿತು. 4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯಿತು.

ತಿವಾರಿ ಅವರ ಪೋಸ್ಟ್ ಅನ್ನು "ಜಾತಿವಾದಿ" ಹೇಳಿಕೆ ಎಂದು ಪರಿಗಣಿಸಿ ಹಲವರು ಟೀಕಿಸಿದ್ದಾರೆ.

"ಮನುಸ್ಮೃತಿಯ ಪ್ರಕಾರ, ಹುಡುಗಿಯರು ಎಲ್ಲಾ ಸಮಯದಲ್ಲೂ ಮನೆಯಲ್ಲಿಯೇ ಇರಬೇಕು, ತಮ್ಮ ಗಂಡನನ್ನು ನೋಡಿಕೊಳ್ಳಬೇಕು ಮತ್ತು ಬೇರೇನೂ ಮಾಡಬಾರದು. ಆದರೆ ಸಂವಿಧಾನದ ಕಾರಣದಿಂದಾಗಿ, ನೀವು ಟ್ವಿಟರ್‌ನಲ್ಲಿ ನಿಮ್ಮ ದೇಹ ಬಾಗಿಸಿದ್ದೀರಿ. ನಿಮ್ಮ ಜೀವನವನ್ನು ನಿಮ್ಮಿಷ್ಟದ ರೀತಿಯಲ್ಲಿ ನಡೆಸುತ್ತಿದ್ದೀರಿ. ಹಾಗೇ ಮುಂದುವರಿಯಿರಿ. ಅದಕ್ಕಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಧನ್ಯವಾದ ತಿಳಿಸಿ" ಎಂದು ಒಬ್ಬ ಕಮೆಂಟ್ ಮಾಡಿದ್ದಾರೆ.

ಅನುರಾಧಾ ತಿವಾರಿ ಎಂಬವರು ಪ್ರತಿಕ್ರಿಯಿಸಿ, "ರಾಣಿ ಲಕ್ಷ್ಮೀಬಾಯಿ ಅವರ ಬಗ್ಗೆ ಕೇಳಿದ್ದೀರಾ, ದಡ್ಡರೇ?" ಎಂದು ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ವಕೀಲರಾದ ಶಶಾಂಕ್ ರತ್ನೂ, ಜಾತೀಯತೆ ಇನ್ನೂ ಏಕೆ ಅಸ್ತಿತ್ವದಲ್ಲಿದೆ ಎಂದು ನಿಖರವಾಗಿ ಹೇಳಿದ್ದಾರೆ. "ಆನುವಂಶಿಕವಾಗಿ ಉನ್ನತಜಾತಿವಾದದ ಬಗ್ಗೆ ಕೆಲವು ಆಲೋಚನೆಗಳಿವೆ. #onefamilyonereservation!" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಿವಾರಿ ಅವರ ಮತ್ತೊಂದು ಪೋಸ್ಟ್‌ನಲ್ಲಿ, ತನ್ನ ವಿವಾದಾತ್ಮಕ ಪೋಸ್ಟ್‌ ಅನ್ನು ಸಮರ್ಥಸಿಕೊಂಡಿದ್ದಾರೆ.

"ನಿಜವಾದ ಜಾತಿವಾದಿಗಳು ಯಾರೆಂಬುದು ತಿಳಿಯುತ್ತದೆ. ಮೇಲ್ಜಾತಿಯವರು ವ್ಯವಸ್ಥೆಯಿಂದ ಏನನ್ನೂ ಪಡೆಯುವುದಿಲ್ಲ. ಅವರಿಗೆ ಮೀಸಲಾತಿ ಇಲ್ಲ, ಉಚಿತವಾಗಿ ಏನೂ ಸಿಗುವುದಿಲ್ಲ. ನಾವು ಎಲ್ಲವನ್ನೂ ಸ್ವಂತವಾಗಿ ಸಂಪಾದಿಸುತ್ತೇವೆ ಮತ್ತು ನಮ್ಮ ವಂಶಾವಳಿಯ ಬಗ್ಗೆ ಹೆಮ್ಮೆ ಪಡುವ ಎಲ್ಲ ಹಕ್ಕುಗಳನ್ನು ಹೊಂದಿದ್ದೇವೆ" ಎಂದು ಅವರು ಬರೆದಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ, ಬ್ರಾಹ್ಮಣರು ತಮ್ಮ ಅಸ್ತಿತ್ವಕ್ಕಾಗಿ ತಪ್ಪಿತಸ್ಥರೆಂದು ಭಾವಿಸುವಂತೆ ಮಾಡಲು ಸಂಪೂರ್ಣ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

"ಈ ನಿರೂಪಣೆಯನ್ನು ಬದಲಾಯಿಸುವ ಸಮಯ ಬಂದಿದೆ. ಕ್ಷಮೆಯಿಲ್ಲದ ಬ್ರಾಹ್ಮಣರಾಗಿರಿ. ಅದನ್ನು ನಿಮ್ಮ ತೋಳಿನ ಮೇಲೆ ಧರಿಸಿ. ಸಾಮಾಜಿಕ ನ್ಯಾಯದ ಹರಿಕಾರರು ಉರಿದುಕೊಳ್ಳಲಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಅನುರಾಧಾ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ಸುದ್ದಿಯಾಗುವುದು ಇದೇ ಮೊದಲಲ್ಲ. ಈ ಹಿಂದೆ ಮೀಸಲಾತಿ ವಿರುದ್ಧ ಮಾತನಾಡುವ ಮೂಲಕ ಆಕೆ ಗಮನ ಸೆಳೆದಿದ್ದರು.

"ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. 95% ಅಂಕ ಗಳಿಸಿದ್ದರೂ ನನಗೆ ಪ್ರವೇಶ ಸಿಗಲಿಲ್ಲ. ಆದರೆ ನನ್ನ ಸಹಪಾಠಿ 60% ಗಳಿಸಿದಳು. ಆಕೆಯ ಕುಟುಂಬದ ಹಿನ್ನಲೆ ಚೆನ್ನಾಗಿತ್ತು. ಆದರೂ ಪ್ರವೇಶ ಸಿಕ್ಕಿತು. ನೀವು ನನ್ನನ್ನು ನಿಮಗೆ ಮೀಸಲಾತಿಯಿಂದ ಯಾಕೆ ಸಮಸ್ಯೆ?" ಎಂದು ಕೇಳುತ್ತೀರಿ, ಎಂದು ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News