ಬೈಕ್ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Update: 2023-11-07 05:26 GMT

ಮೃತ ಯುವಕರು 

ಕೊಡಗು: ಬೈಕ್ ಒಂದು ವಿದ್ಯುತ್ ದೀಪದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಬಿರ್ಚಿ ವುಡ್ ರೆಸಾರ್ಟ್ ಬಳಿ ಸೋಮವಾರ ತಡರಾತ್ರಿ ವರದಿಯಾಗಿದೆ. 

ಮೃತರನ್ನು ಸುಂಟಿಕೊಪ್ಪದ ಮದುರಮ ಬಡಾವಣೆ ನಿವಾಸಿಗಳಾದ ಉದಯ(25) ಚಂದನ್(26) ಎಂದು ಗುರುತಿಸಲಾಗಿದೆ. 

ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುವಾಗ ತಡರಾತ್ರಿ ಈ ಅಪಘಾತ ಸಂಭವಿಸಿದೆ. ನಿರ್ಜನ ಪ್ರದೇಶವಾದ್ದರಿಂದ ಬೆಳಗಿನವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ ಎಂದು ಹೇಳಲಾಗಿದೆ.

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News