ವಿಪಕ್ಷ ನಾಯಕನ ಆಯ್ಕೆ ಮಾಡುವುದನ್ನು ಮರೆತೇ ಬಿಟ್ಟ ಬಿಜೆಪಿ: ಕಾಂಗ್ರೆಸ್ ಟೀಕೆ
ಬೆಂಗಳೂರು: ''ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದನ್ನೇ ಬಿಜೆಪಿ ಮರೆತಂತಿದೆ'' ಎಂದು ಕಾಂಗ್ರೆಸ್ ಟೀಕಿಸಿದೆ.
ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನ ರೇಸ್ ನಲ್ಲಿರುವ ಶಾಸಕರ ಕಾಲೆಳೆದಿದೆ.
ʼʼಬೊಮ್ಮಾಯಿಯವರು ಆಸೆಯಿಂದ ದೆಹಲಿಗೆ ಹೋಗಿದ್ದೂ ‘ದಂಡ‘ಯಾತ್ರೆ ಆಯ್ತು. ಯತ್ನಾಳ್ ಅವರೂ ಅಬ್ಬರಿಸಿ ಸುಸ್ತಾಗಿ ಮಲಗಿದ್ದಾಯ್ತು, ಸುನಿಲ್ ಕುಮಾರ್ ಅವರೂ ಸೈಲೆಂಟ್ ಆಗಿ ಮನೆ ಸೇರಿದ್ದಾಯ್ತು, ವಿಪಕ್ಷ ನಾಯಕನ ಆಯ್ಕೆ ಮಾಡುವ ಸೂಕ್ತ ಸಂದರ್ಭ, ಸಮಯ, ಮುಹೂರ್ತ ಇನ್ನೂ ಕೂಡಿ ಬರಲಿಲ್ಲವೇʼʼ ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
ʼʼಹೈಕಮಾಂಡ್ ನಾಯಕರು ಕರ್ನಾಟಕದ ಬಿಜೆಪಿ ಮೇಲೆ ಎಳ್ಳಷ್ಟೂ ಭರವಸೆ ಇಟ್ಟುಕೊಂಡಿಲ್ಲವೇ?ʼʼ ಎಂದು ಕಾಂಗ್ರೆಸ್ ಟೀಕಿಸಿದೆ.
ಆಗಸ್ಟ್ 15 ರ ನಂತರ ತೀರ್ಮಾನ?
ಇತ್ತೀಚೆಗೆ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼʼಪ್ರತಿಪಕ್ಷದ ನಾಯಕನ ಸ್ಥಾನದ ಕುರಿತು ಆಗಸ್ಟ್ 15 ರ ನಂತರ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪಕ್ಷದ ಹೈಕಮಾಂಡ್ ನಾಯಕರು ತಿಳಿಸಿದ್ದಾರೆʼʼ ಎಂದು ಹೇಳಿದ್ದರು.