ಚಿಕ್ಕಮಗಳೂರು: ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಅಪಾಯಕಾರಿ ಬಂಡೆ ಕಲ್ಲುಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸುತ್ತಿರುವ ಪ್ರವಾಸಿಗರು

Update: 2023-07-26 17:53 GMT

ಚಿಕ್ಕಮಗಳೂರು: ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳಕೊಳ್ಳಗಳಿಂದ ನಿರ್ಮಾಣವಾಗಿರು ಝರಿ, ಜಳಪಾತಗಳನ್ನು ವೀಕ್ಷಿಸಲು ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಜಲಪಾತ ಪ್ರದೇಶಗಳಲ್ಲಿ ಪ್ರವಾಸಿಗರನ್ನು ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿದೆ. 

ಪೊಲೀಸ್ ಇಲಾಖೆ, ಜಿಲ್ಲಾಡಳಿತ ಮಳೆ ಕಾರಣಕ್ಕೆ ಪ್ರವಾಸ ಮುಂದೂಡುವುದೂ ಸೇರಿದಂತೆ ಹಳ್ಳ, ನದಿಗಳ ಬಳಿ ಸುಳಿಯದಂತೆ ಸೆಲ್ಪಿ ತೆಗೆಯದಂತೆ ಆದೇಶ ಹೊರಡಿಸಿದ್ದರೂ ಪ್ರವಾಸಿಗರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಚಾರ್ಮಾಡಿಘಾಟಿ ಪ್ರದೇಶದಲ್ಲಿ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿದ್ದು, ಪೊಲೀಸರ ಕಣ್ತಪ್ಪಿಸಿ ಪ್ರವಾಸಿಗರು ಅಪಾಯಕಾರಿ ಬಂಡೆ ಕಲ್ಲುಗಳ ಮೇಲೆ ಹತ್ತಿ ಸೆಲ್ಫಿಗೆ ಫೋಸ್ ನೀಡುತ್ತಿದ್ದಾರೆ. ಸ್ವಲ್ಪ ಮೈಮರೆತರೆ ಅಪಾಯ ಸಂಭವಿಸಲಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಪಾಯದ ಸ್ಥಳಗಳಿಗೆ ಹೋಗದಂತೆ ಮನವಿ ಮಾಡಿದರು ಪ್ರವಾಸಿಗರು ಕ್ಯಾರೆ ಎನ್ನುತ್ತಿಲ್ಲ. ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳ ಮಲೆ ವಿವರ:

ಜಿಲ್ಲೆಯ ವಿವಿಧ ತಾಲೂಕುಗಳ ಹಲವೆಡೆ ಬಿದ್ದಿರುವ ಮಳೆ ಮಾಹಿತಿ ಇಂತಿದೆ. ಚಿಕ್ಕಮಗಳೂರು ಕಸಬಾ 21.1, ವಸ್ತಾರೆ 42.2,  ಜೋಳದಾಳ್ 51, ಆಲ್ದೂರು 63, ಅತ್ತಿಗುಂಡಿ 105.4, ಸಖರಾಯಪಟ್ಟಣ 51.2, ಕೆ.ಆರ್. ಪೇಟೆ 15, ಬ್ಯಾರುವಳ್ಳಿ 70, ಕಳಸಾಪುರ 20, ಮಳಲೂರು 17.3,ದಾಸರಹಳ್ಳಿ  9.2, ಮೂಡಿಗೆರೆ 72.2, ಕೊಟ್ಟಿಗೆಹಾರ 70.8, ಗೋಣಿಬೀಡು 56.3, ಜಾವಳಿ 79.2, ಕಳಸ 56, ಹಿರೇಬೈಲು 45, ಹೊಸಕೆರೆ 93, ಬಿಳ್ಳೂರು 50, ನರಸಿಂಹರಾಜಪುರ 53.6, ಬಾಳೆಹೊನ್ನೂರು 64,  ಮೇಗರಮಕ್ಕಿ 54, ಶೃಂಗೇರಿ 65.4, ಕಿಗ್ಗ 144, ಕೊಪ್ಪ 90, ಹರಿಹರಪುರ 68, ಜಯಪುರ 89.4, ಬಸರಿಕಟ್ಟೆ 113, ಕಮ್ಮರಡಿ  82.6, ತರೀಕೆರೆ  38, ಲಕ್ಕವಳ್ಳಿ 44.6, ರಂಗೇನಹಳ್ಳಿ 49.2, ಲಿಂಗದಹಳ್ಳಿ 27.6,  ಉಡೇವಾ  29.4, ತಣಿಗೆಬೈಲು  30.2, ತ್ಯಾಗ ದಬಾಗಿ  44.4, ಹುಣಸಘಟ್ಟ 28.6, ಕಡೂಎರು 12, ಬೀರೂರು 20.8, ಸಖರಾಯಪಟ್ಟಣ 42.6, ಸಿಂಗಟಗೆರೆ  29.4, ಪಂಚನಹಳ್ಳಿ 15.2, ಎಮ್ಮೆದೊಡ್ಡಿ 15.2, ಯಗಟಿ 19.2, ಗಿರಿಯಾಪುರ 20.4, ಬಾ ಸೂರು 14.7, ಚೌಳಹಿರಿಯೂರು 14.6, ಅಜ್ಜಂಪುರ 18, ಶಿವನಿ 15, ಬುಕ್ಕಾಂಬುದಿಯಲ್ಲಿ 22.2 ಮಿಲಿ ಮೀಟರ್ ಮಳೆಯಾಗಿದೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News