ರಾಜಕೀಯ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ : ಸಿಎಂ ಸಿದ್ದರಾಮಯ್ಯ

Update: 2024-07-15 13:28 GMT

ಬೆಂಗಳೂರು : ‘ವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ? ಎಷ್ಟು ಸುಳ್ಳು? ಎಂಬುದನ್ನು ಈ ಸದನದಲ್ಲೇ ನಾವು ಬಯಲು ಮಾಡುತ್ತೇವೆ. ರಾಜಕೀಯ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಬಿಜೆಪಿ ಮತ್ತು ಜೆಡಿಎಸ್ ನಾಯಕರೇ, ನಿಮ್ಮ ಪ್ರತಿ ಮಾತಿಗೂ ನನ್ನ ಬಳಿ ಉತ್ತರವಿದೆ. ಇಷ್ಟು ದಿನ ಮಾಧ್ಯಮಗಳ ಎದುರು ಸುಳ್ಳು ಹೇಳುತ್ತಾ, ದೂರದಲ್ಲೆಲ್ಲೋ ನಿಂತು ಗಾಳಿಯಲ್ಲಿ ಗುಂಡು ಹೊಡೆದಂತಲ್ಲ. ಇದು ಸದನ, ಇಲ್ಲಿ ನಿಮ್ಮ ಹಿಟ್ ಅಂಡ್ ರನ್‍ಗೆ ಅವಕಾಶವಿಲ್ಲ’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News